ವಾಷಿಂಗ್ಟನ್ ರೆಸ್ಟೋರೆಂಟ್ ಹೊರಗೆ ಭಾರತೀಯ ಮೂಲದ ವ್ಯಕ್ತಿ ಕೊಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವಾಷಿಂಗ್ಟನ್‌ನ ರೆಸ್ಟೋರೆಂಟ್ ಒಂದರ ಹೊರಗೆ ಭಾರತೀಯ ಮೂಲದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದಾರೆ.

ಡೌನ್‌ಟೌನ್‌ನ ರೆಸ್ಟೋರೆಂಟ್ ಎದುರು ವಿವೇಕ್ ತನೇಜಾ ಹಾಗೂ ಇನ್ನೊಬ್ಬ ವ್ಯಕ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಂತರ ಇದು ಹಲ್ಲೆಗೆ ತಿರುಗಿದ್ದು, ವಿವೇಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲ ಸಮಯದ ನಂತರ ಪೊಲೀಸರು ಆಗಮಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವೇಕ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ವಿವೇಕ್ ಮೃತಪಟ್ಟಿದ್ದಾರೆ. ಜಗಳದ ವೇಳೆ ವಿವೇಕ್‌ನ್ನು ಆರೋಪಿ ತಳ್ಳಿದ್ದು, ಕೆಳಗೆ ಬಿದ್ದ ವಿವೇಕ್ ತಲೆಗೆ ಗಂಭೀರ ಗಾಯಗಳಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದು, ಇದು ಕೊಲೆ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಡೈನಮೊ ಕಂಪನಿಯ ಸಹ ಸಂಸ್ಥಾಪಕರಾದ ವಿವೇಕ್ ಮೇಲೆ ಹಲ್ಲೆ ಮಾಡಿದ್ದು ಯಾರು ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!