August 24, 2026
Monday, August 24, 2026
spot_img

FOOD | ಇವತ್ತು ಅನ್ನ ಸಾಂಬಾರ್ ತಿನ್ನೋದು ಬೇಡ ಅಂತಿದ್ರೆ ಈ ಮಸಾಲಾ ರಾಗಿ ರೊಟ್ಟಿ & ಶೇಂಗಾ ಚಟ್ನಿ ಟ್ರೈ ಮಾಡಿ!

ಒಂದು ದಿನ ಅನ್ನ-ಸಾಂಬಾರ್ ತಿನ್ನೋ ಮನಸ್ಸೇ ಇಲ್ಲ ಅಂದ್ರೆ, ಮನೆಯಲ್ಲೇ ಸುಲಭವಾಗಿ ಮಸಾಲಾ ರಾಗಿ ರೊಟ್ಟಿ ಮತ್ತು ಶೇಂಗಾ ಚಟ್ನಿ ಮಾಡಿ. ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಹಿತ. ರಾಗಿ ಫೈಬರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಹೊಟ್ಟೆ ತುಂಬುವ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ.

ಬೇಕಾಗುವ ಸಾಮಗ್ರಿಗಳು

ರಾಗಿ ಹಿಟ್ಟು – 1 ಕಪ್
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಹಸಿಮೆಣಸು – 1
ತುರಿದ ಕ್ಯಾರೆಟ್ – 2 ಟೇಬಲ್ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ನೀರು – ಅಗತ್ಯವಷ್ಟು

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹಾಕಿ, ನೀರು ಸೇರಿಸಿ ಮೃದುವಾದ ಹಿಟ್ಟು ತಯಾರಿಸಿ. ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್ ಮೇಲೆ ಕೈಯಿಂದ ತಟ್ಟಿ ರೊಟ್ಟಿ ಆಕಾರಕ್ಕೆ ಮಾಡಿ. ಬಿಸಿ ತವೆಯ ಮೇಲೆ ಎಣ್ಣೆ ಹಾಕಿ ಎರಡು ಬದಿಯೂ ಚೆನ್ನಾಗಿ ಬೇಯಿಸಿ.

ಶೇಂಗಾ ಚಟ್ನಿ ರೆಸಿಪಿ ಇಲ್ಲಿದೆ ನೋಡಿ

ಬೇಕಾಗುವ ಸಾಮಗ್ರಿಗಳು

ಹುರಿದ ಶೇಂಗಾ – ½ ಕಪ್
ಬೆಳ್ಳುಳ್ಳಿ – 2 ಕಳಿ
ಒಣ ಮೆಣಸಿನಕಾಯಿ – 2
ಉಪ್ಪು – ಸ್ವಲ್ಪ
ಹುಣಸೆ – ಚಿಕ್ಕ ತುಂಡು

ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿ, ಬೇಕಾದರೆ ಒಗ್ಗರಣೆ ಹಾಕಿ. ಬಿಸಿ ರಾಗಿ ರೊಟ್ಟಿಗೆ ಈ ಚಟ್ನಿ ಜೊತೆಯಾಗಿದ್ರೆ ರುಚಿನೇ ಬೇರೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !