ಬೇಕಾಗುವ ಸಾಮಗ್ರಿಗಳು:
ಹಾಲು: 1 1/2 ಕಪ್
ಕಸ್ಟರ್ಡ್ ಪುಡಿ: 3 ಟೇಬಲ್ ಚಮಚ
ಕಂಡೆನ್ಸ್ಡ್ ಮಿಲ್ಕ್: 1/2 ಕಪ್
ಕೇಸರಿ: ಕೆಲವು ಎಳೆಗಳು
ವಿಪ್ಪಿಂಗ್ ಕ್ರೀಮ್: 100ml
ಏಲಕ್ಕಿ ಪುಡಿ: ಸ್ವಲ್ಪ
ಕತ್ತರಿಸಿದ ಒಣ ಹಣ್ಣುಗಳು
ರಸ್ಮಾಲಾಯ್ ತುಂಡುಗಳು
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಹಾಲು ಹಾಕಿ ಬಿಸಿ ಮಾಡಿ. ಸ್ವಲ್ಪ ಹಾಲನ್ನು ತೆಗೆದು ಕಸ್ಟರ್ಡ್ ಪುಡಿಯನ್ನು ಅದರಲ್ಲಿ ಬೆರೆಸಿ. ಕಸ್ಟರ್ಡ್ ಮಿಶ್ರಣವನ್ನು ಬಿಸಿ ಹಾಲಿಗೆ ಹಾಕಿ, ಗಂಟುಗಳಾಗದಂತೆ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ದಪ್ಪವಾಗುವವರೆಗೂ ಬೇಯಿಸಿ.
ಕಂಡೆನ್ಸ್ಡ್ ಮಿಲ್ಕ್, ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಸ್ಟರ್ಡ್ ಮಿಶ್ರಣಕ್ಕೆ ಸೇರಿಸಿ ತಣ್ಣಗಾಗಲು ಬಿಡಿ. ವಿಪ್ಪಿಂಗ್ ಕ್ರೀಮ್ ಅನ್ನು ಚೆನ್ನಾಗಿ ಬೀಟ್ ಮಾಡಿ. ತಣ್ಣಗಾದ ಕಸ್ಟರ್ಡ್ ಮಿಶ್ರಣಕ್ಕೆ ವಿಪ್ಪಿಂಗ್ ಕ್ರೀಮ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ರಸ್ಮಾಲಾಯ್ ತುಂಡುಗಳು ಮತ್ತು ಕತ್ತರಿಸಿದ ಒಣ ಹಣ್ಣುಗಳನ್ನು ಐಸ್ ಕ್ರೀಮ್ ಮಿಶ್ರಣಕ್ಕೆ ಸೇರಿಸಿ. ಈ ಮಿಶ್ರಣವನ್ನು ಒಂದು ಏರ್ ಟೈಟ್ ಡಬ್ಬದಲ್ಲಿ ಹಾಕಿ ಫ್ರೀಜರ್‌ನಲ್ಲಿ 6-8 ಗಂಟೆಗಳ ಕಾಲ ಗಟ್ಟಿಯಾಗಲು ಬಿಡಿ. ಐಸ್ ಕ್ರೀಮ್ ಗಟ್ಟಿಯಾದ ನಂತರ, ಅದನ್ನು ಸ್ಕೂಪ್ ಮಾಡಿ ನಿಮ್ಮ ಮನೆಯಲ್ಲಿಯೇ ರುಚಿಕರವಾದ ರಸ್ಮಾಲಾಯ್ ಐಸ್ ಕ್ರೀಮ್ ಅನ್ನು ತಯಾರಿಸಿ.