September 14, 2026
Monday, September 14, 2026
spot_img

FOOD | ಮಳೆಗಾಲದ ಮಸ್ತ್ ಟೇಸ್ಟ್: ಖಾರ ಖಾರ ಮಶ್ರೂಮ್ ಫ್ರೈ; ಮನೆಯಲ್ಲೇ ಮಾಡಿ!

ಮಶ್ರೂಮ್‌ನಿಂದ ತಯಾರಿಸುವ ಈ ಖಾರ ಖಾರ ಫ್ರೈ ಊಟದ ಜೊತೆ ಸೈಡ್ ಡಿಶ್ ಆಗಿಯೂ, ಸಂಜೆ ಸ್ನ್ಯಾಕ್ಸ್ ಆಗಿಯೂ ಸವಿಯಲು ಸೂಪರ್. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ರೆಸಿಪಿ ರುಚಿ ಮತ್ತು ಆರೋಗ್ಯ ಎರಡನ್ನೂ ನೀಡುತ್ತದೆ.

ಬೇಕಾಗುವ ಪದಾರ್ಥಗಳು

ಮಶ್ರೂಮ್ – 250 ಗ್ರಾಂ (ತೊಳೆದು ಕತ್ತರಿಸಿದ್ದು)
ಈರುಳ್ಳಿ – 2 (ಸಣ್ಣದಾಗಿ ಹೆಚ್ಚಿದ್ದು)
ಟೊಮೆಟೊ – 1 (ಸಣ್ಣದಾಗಿ ಹೆಚ್ಚಿದ್ದು)
ಹಸಿಮೆಣಸಿನಕಾಯಿ – 2 ರಿಂದ 3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಖಾರದ ಪುಡಿ – 1 ಚಮಚ
ಅರಿಶಿನ ಪುಡಿ – ½ ಚಮಚ
ಕಾಳುಮೆಣಸಿನ ಪುಡಿ – 1 ಚಮಚ
ಗರಂ ಮಸಾಲೆ – ½ ಚಮಚ
ಎಣ್ಣೆ ಅಥವಾ ತುಪ್ಪ – 2 ರಿಂದ 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ಬಳಿಕ ಟೊಮೆಟೊ ಹಾಕಿ ಚೆನ್ನಾಗಿ ಮೆತ್ತಗಾಗುವವರೆಗೆ ಬೇಯಿಸಿ.

ಅರಿಶಿನ, ಖಾರದ ಪುಡಿ, ಗರಂ ಮಸಾಲೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಕತ್ತರಿಸಿದ ಮಶ್ರೂಮ್ ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮಶ್ರೂಮ್ ಬಿಡುವ ನೀರು ಸಂಪೂರ್ಣವಾಗಿ ಆವಿಯಾದ ನಂತರ ಚೆನ್ನಾಗಿ ಹುರಿಯಿರಿ.

ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ.

ಬಿಸಿ ಬಿಸಿ ಮಶ್ರೂಮ್ ಫ್ರೈ ಅನ್ನು ರೊಟ್ಟಿ, ಚಪಾತಿ, ಅನ್ನ ಅಥವಾ ಸಂಜೆ ಸ್ನ್ಯಾಕ್ಸ್ ಆಗಿ ಸವಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !