September 16, 2026
Wednesday, September 16, 2026
spot_img

FOOD | ಬಿಸಿ ಅನ್ನದ ಜೊತೆಗೆ ಆಲೂಗೆಡ್ಡೆ ಮೊಸರು ಬಜ್ಜಿ ಸವಿದರೆ ಏನ್ ರುಚಿ ಅಂತೀರ

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ, ಸುಲಭವಾಗಿ ತಯಾರಿಸಬಹುದಾದ ಮತ್ತು ಅನ್ನ ಅಥವಾ ಚಪಾತಿ ಜೊತೆ ಸೂಪರ್ ಕಾಂಬಿನೇಶನ್ ಆಗಿರುವ ರುಚಿಕರವಾದ ಸೈಡ್ ಡಿಶ್ ಆಲೂಗಡ್ಡೆ ಮೊಸರು ಬಜ್ಜಿ.

ಬೇಕಾಗುವ ಪದಾರ್ಥಗಳು:

ಆಲೂಗಡ್ಡೆ – 2-3 (ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿದ್ದು)
ಮೊಸರು – 1-2 ಕಪ್
ಹಸಿರು ಮೆಣಸಿನಕಾಯಿ – 2-3
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ:

ಎಣ್ಣೆ – 1-2 ಚಮಚ
ಸಾಸಿವೆ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಕಡಲೆಬೇಳೆ – 1 ಚಮಚ
ಇಂಗು – ಚಿಟಿಕೆ
ಕರಿಬೇವು – ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಬೇಯಿಸಿದ ಆಲೂಗಡ್ಡೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಮೊಸರು, ಉಪ್ಪು, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.

ಈಗ ಒಂದು ಸಣ್ಣ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಒಡೆದ ನಂತರ ಜೀರಿಗೆ, ಕಡಲೆಬೇಳೆ, ಇಂಗು ಮತ್ತು ಕರಿಬೇವು ಸೇರಿಸಿ ಒಗ್ಗರಣೆ ತಯಾರಿಸಿ.

ಈ ಒಗ್ಗರಣೆಯನ್ನು ಮೊಸರು-ಆಲೂಗಡ್ಡೆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ.

ತಯಾರಾದ ಆಲೂಗಡ್ಡೆ ಮೊಸರು ಬಜ್ಜಿಯನ್ನು ಅನ್ನ, ರೋಟಿ ಅಥವಾ ಚಪಾತಿ ಜೊತೆ ಸರ್ವ್ ಮಾಡಿದರೆ ಅದ್ಭುತ ರುಚಿ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !