ಪ್ರವಾಸಕ್ಕಾಗಿ ಬಂದಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು

ಹೊಸದಿಗಂತ ವರದಿ, ಕುಶಾಲನಗರ:

ಪ್ರವಾಸಕ್ಕಾಗಿ ಬಂದಿದ್ದ ಯುವಕನೊಬ್ಬ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದುಬಾರೆಯಲ್ಲಿ ಮಂಗಳವಾರ ನಡೆದಿದೆ.
ಮುಂಬೈನ ನಾಸಿಕ್’ನ ನಿವಾಸಿ ದಾದಾಜಿ ಮಹಾಜನ್ ಎಂಬವರ ಪುತ್ರ ಅನಿಕೇತ್ (17) ಎಂಬಾತ ಮೃತ ದುರ್ದೈವಿ.
ಮುಂಬೈನಿಂದ 23 ಮಂದಿ ಪ್ರವಾಸಿಗರು ದುಬಾರೆ ಪ್ರವಾಸಿ ತಾಣಕ್ಕೆ ಆಗಮಿಸಿದ್ದರು. ಮಂಗಳವಾರ ನದಿಯಲ್ಲಿ ಈಜಾಡಲು ತೆರಳಿದ ಸಂದರ್ಭ ಯುವಕ ನದಿಯಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ.
ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೋಟಿಂಗ್ ಚಾಲಕರ ನೆರವಿನಿಂದ ಮೃತ ದೇಹವನ್ನು ನದಿಯಿಂದ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.
ಯುವಕನ ದುರ್ಮರಣದಿಂದಾಗಿ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.ಯುವಕನ ತಂದೆ ನಾಸಿಕ್’ನಲ್ಲಿ ರೈತರಾಗಿದ್ದು, ಯುವಕ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!