ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿ: ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದ ಆಕಾಶ್​ ಏರ್​​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏರ್ ಇಂಡಿಯಾದ ಬಳಿಕ ಆಕಾಶ ಏರ್ ನವೆಂಬರ್ 1 ರಿಂದ ವಿಮಾನದಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಲು ಅನುಮತಿಸುವುದಾಗಿ ಗುರುವಾರ ಘೋಷಿಸಿದ್ದು, ನೂತನ ಆಕಾಶ ಏರ್ ವಿಮಾನಯಾನ ಸಂಸ್ಥೆಯ ಬುಕ್ಕಿಂಗ್ ಅಕ್ಟೋಬರ್ 15ರಿಂದ ಆರಂಭವಾಗುತ್ತಿದೆ.

ಪ್ರಾಣಿ ಪ್ರಿಯರು ತಮ್ಮ ಸಾಕುಪ್ರಾಣಿಗಳೊಂದಿಗೆ ನವೆಂಬರ್ 1ರಿಂದ, ತಮ್ಮ ಕ್ಯಾಬಿನ್‌ನಲ್ಲಿ ಪ್ರಯಾಣಿಸಬಹುದು. ಕ್ಯಾಬಿನ್‌ನಲ್ಲಿ 7 ಕೆ.ಜಿ. ತೂಕದ ಸಾಕುಪ್ರಾಣಿಗಳನ್ನು ಮಾತ್ರ ಅನುಮತಿಸಲಾಗುವುದು. ಇದಕ್ಕಿಂತ ಹೆಚ್ಚಿನವಕ್ಕೆ ಕಾರ್ಗೋದಲ್ಲಿ ಅನುಮತಿಸಬಹುದು ಎಂದು ಆಕಾಶ ಏರ್ ಹೇಳಿದೆ. ಸಾಕುಪ್ರಾಣಿಗಳಿಗೆ ಅನುಮತಿ ಲಭ್ಯವಿರುವ ಮೊದಲ ಆಕಾಶ ಏರ್ ಫ್ಲೈಟ್ ನವೆಂಬರ್ 1 ರಂದು ಟೇಕ್ ಆಫ್ ಆಗಲಿದೆ. 7 ಕೆಜಿ (ಒಂದು ಸಾಕುಪ್ರಾಣಿ) ವರೆಗಿನ ಸಾಕುಪ್ರಾಣಿಗಳನ್ನು ಕ್ಯಾಬಿನೊಳಗೆ ಅನುಮತಿ ನೀಡಲಾಗಿದೆ. ಉಳಿದವುಗಳನ್ನು ಕಾರ್ಗೋದಲ್ಲಿ ಅನುಮತಿಸಬಹುದು ಎಂದು ಆಕಾಶ ಏರ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!