ಕಲ್ಯಾಣ ಭಾಗದ ಜನರಿಗೆ ಬಿಜೆಪಿ ಅನ್ಯಾಯ: ರಾಜ್ಯ ಉಸ್ತುವಾರಿ ಸುರ್ಜೆವಾಲ ಆರೋಪ

ಹೊಸ ದಿಗಂತ ವರದಿ, ಕಲಬುರಗಿ:

ಕಳೆದ ಮೂರು ವಷ೯ಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಕಾ೯ರ ಕಲ್ಯಾಣ ಕನಾ೯ಟಕ ಭಾಗದ ಜನರಿಗೆ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ ಸಿಂಗ್ ಸುಜೇ೯ವಾಲ ಆರೋಪಿಸಿದ್ದಾರೆ.

ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ.ಕ.ಭಾಗಕ್ಕೆ ಬೊಮ್ಮಾಯಿ ಸಕಾ೯ರ ದ್ವೇಷ,ಬೇಧ ಭಾವದ ಕೆಲಸ ಮಾಡುತ್ತಿದೆ. ಈ ಭಾಗದಲ್ಲಿ ಆಗಬೇಕಾದ ಹಲವು ಅಭಿವೃದ್ಧಿ ಕೆಲಸಗಳು ನಡೆದಿಲ್ಲ.40000 ಹುದ್ದೆಗಳು ಖಾಲಿಯಿದ್ದು,ಭತಿ೯ಗೆ ವಿನಾವೇಶ ಮಾಡುತ್ತಿದೆ ಎಂದರು.

ಈ ಭಾಗದ 371 ಜೆ ಕಲಂ,ಗೆ ಬಿಜೆಪಿ ವಿರೋಧ ಮಾಡಿತ್ತು.ಆದರೆ, ಕಾಂಗ್ರೆಸ್ ಪಕ್ಷ 2013ರಲ್ಲಿ ಜಾರಿ ಮಾಡುವಲ್ಲಿ ಯಶಸ್ಸು ಕಂಡಿದೆ.ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಕಾಂಗ್ರೆಸ್ ಈ ಭಾಗಕ್ಕೆ ದೊಡ್ಡ ದೊಡ್ಡ ಕೊಡುಗೆ ನೀಡಿದೆ.ಇ.ಎಸ್. ಐ ಆಸ್ಪತ್ರೆ,ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಮೂಲಕ ಹಲವು ಅಭಿವೃದ್ಧಿ ಕೆಲಸ ಮಾಡಿದೆ ಎಂದರು.

ಬಿಜೆಪಿ ಜನರ ಜೀವನದ ಜೊತೆಗೆ ಆಟವಾಡುತ್ತಿದ್ದು,ಆಡಲಿ.ನಾವು ಜನರ ಜೀವನ ರೂಪಿಸುವ ಕೆಲಸ ಮಾಡುತ್ತೇವೆ.ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಜನರೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಮೋದಿಗೆ ರಾವಣ ಎಂದು ಕರೆದ ಮಲ್ಲಿಕಾರ್ಜುನ ಖಗೆ೯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ಸಂವಿಧಾನದ ಮೇಲೆ ಪ್ರಹಾರ ಮಾಡುವ , ನಿರುದ್ಯೋಗ ಮೇಲೆ ಪ್ರಹಾರ ಮಾಡುವ ರಾವಣನನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗಿದೆ ಎಂದು ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾಯ೯ಕತ೯ ಸಿಎಂ ಇದ್ದ ಹಾಗೆ. ಪೇ ಸಿಎಂ,40% ಸಕಾ೯ರವನ್ನು ಕೆಳಗಿಳಿಸುವುದೇ ನಮ್ಮ ಮುಖ್ಯ ಅಜೆಂಡಾ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!