ಡಿ.13ರಂದು ಬಿಡುಗಡೆಯಾಗಲಿದೆ ‘ಪೊಮ್ಮಾಲೆ ಕೊಡಗ್’ ಕೊಡವ ಚಲನಚಿತ್ರ

ಹೊಸ ದಿಗಂತ ವರದಿ, ಮಡಿಕೇರಿ :

ಕೊಡವ ಮಕ್ಕಡ ಕೂಟ ಅರ್ಪಿಸುವ ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಬ್ಯಾನರ್’ನಡಿ ನಿರ್ಮಾಪಕಿ ಕೊಟ್ಟುಕತ್ತೀರ ಯಶೋದಾ ಪ್ರಕಾಶ್ ನಿರ್ಮಿಸಿ, ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ತಮ್ಮ ‘ವಿಧಿರ ಕಳಿಲ್’ ಕಾದಂಬರಿ ಆಧರಿಸಿ ನಿರ್ದೇಶಿಸಿರುವ “ಪೊಮ್ಮಾಲೆ ಕೊಡಗ್” ಕೊಡವ ಚಲನಚಿತ್ರ ಡಿ.13 ರಂದು ಮಡಿಕೇರಿಯಲ್ಲಿ ಬಿಡುಗಡೆಯಾಗಲಿದೆ.
ನಗರದ ಕಾವೇರಿ ಕಲಾಕ್ಷೇತ್ರದ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯುವ ಚಿತ್ರ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ.ಸುನೀಲ್ ಸುಬ್ರಮಣಿ ಸೇರಿದಂತೆ ಹಲವು ಗಣ್ಯರು ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕೊಡಗಿನ ಸಂಶೋಧನೆಗೆಂದು ಬಂದ ಯುವತಿಯೊಬ್ಬಳ ಸುತ್ತ ಹೆಣೆದ ಕಥೆಯಾಧಾರಿತ ಚಿತ್ರ ಇದಾಗಿದ್ದು, ಹಾಕತ್ತೂರಿನ ಅಮ್ಮಾಟಂಡ ಐನ್‍ಮನೆ ಸೇರಿದಂತೆ ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ಚಿತ್ರ ನಿರ್ಮಾಣಗೊಂಡಿದೆ.
ಚಿತ್ರ ತಂಡ: ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ನಿರ್ಮಾಪಕಿ ಕೊಟ್ಟುಕತ್ತೀರ ಯಶೋದಾ ಪ್ರಕಾಶ್, ಸಾಹಿತ್ಯ ಆಪಾಡಂಡ ಜಗ ಮೊಣ್ಣಪ್ಪ, ನಿರ್ಮಾಣ ನಿಯಂತ್ರಕರಾಗಿ ಈರಮಂಡ ವಿಜಯ್ ಉತ್ತಯ್ಯ, ಛಾಯಾಗ್ರಾಹಕರಾಗಿ ಶಿವಕುಮಾರ್ ಅಂಬಲಿ ಕಾರ್ಯನಿರ್ವಹಿಸಿದ್ದು, ವಿಠಲ್ ರಂಗದೋಳ್ ಸಂಗೀತ ನೀಡಿದ್ದಾರೆ.
ಬಯೊಂಡ ಡಿನು ಸಚಿನ್, ಚಕ್ಕೆರ ಪಂಚಮ್ ಬೋಪಣ್ಣ ಹಾಡುಗಳನ್ನು ಹಾಡಿದ್ದು, ಸಂಶೋಧನೆ, ಕೊಡವ ಕ್ಲನ್ ಗುಮ್ಮಟ್ಟೀರ ಕಿಶು ಉತ್ತಪ್ಪ, ಸಹ ಸಂಭಾಷಣೆ ಆಪಾಡಂಡ ಜಗ ಮೊಣ್ಣಪ್ಪ, ಉಳುವಂಗಡ ಕಾವೇರಿ ಉದಯ, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ತಾಂತ್ರಿಕ ವಿಭಾಗದಲ್ಲಿ ಚೋಕಂಡ ದಿನು ನಂಜಪ್ಪ, ಈರಮಂಡ ಹರಿಣ ವಿಜಯ್, ನಾಗರಾಜ್ ನೀಲ್, ಅಪೂರ್ವ, ಶರತ್, ಮೇಘರಾಜ್, ಪುಟ್ಟ ಪಾಂಡವಪುರ, ಪ್ರದೀಪ್ ಆರ್ಯನ್, ನಿರಂಜನ್ ಹಾಗೂ ಸಹ ನಿರ್ದೇಶಕರಾಗಿ ಇತಿಹಾಸ ಶಂಕರ್ ಕಾರ್ಯನಿರ್ವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!