‘ಆಂದೋಲನ ಜೀವಿ’ ಅರ್ಥವ್ಯವಸ್ಥೆಗೆ ಮೋದಿ ಮಹಾ ಪ್ರಹಾರ? ವಿದೇಶಿ ದೇಣಿಗೆ ಪರವಾನಗಿ ನವೀಕರಿಸದೇ ಸುಮ್ಮನಾಗಿವೆ 6,000 ಸಂಸ್ಥೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್

ಸುಮಾರು 6000 ಸರಕಾರೇತರ ಸಂಸ್ಥೆ (ಎನ್‌ಜಿಒ)ಗಳು ತಮ್ಮ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ  (ಎಫ್ ಸಿ ಆರ್‌ ಎ) ಪರವಾನಗಿಯನ್ನು ನವೀಕರಿಸಲು ಅರ್ಜಿ ಸಲ್ಲಿಸಲು ವಿಫಲವಾಗಿದ್ದರಿಂದ ಜನವರಿ 1ಕ್ಕೆ ಅವುಗಳ ಪರವಾನಗಿಯನ್ನು ಸ್ಥಗಿತಗೊಳಿಸಲಾಗಿದೆ.

ಎಫ್ ಸಿ ಆರ್‌ ಎ ಅಡಿಯಲ್ಲಿ ನೋಂದಾಯಿಸಲಾದ ಒಟ್ಟು ಎನ್‌ಜಿಒಗಳಲ್ಲಿ ಸಕ್ರಿಯ ಎನ್‌ಜಿಒಗಳ ಸಂಖ್ಯೆ ಇಂದು 22,762 ರಿಂದ 16,829ಕ್ಕೆ ಇಳಿದಿದೆ. ಆದರೆ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 12,580 ಎನ್‌ಜಿಒಗಳು ತಮ್ಮ ಪ್ರಮಾಣಪತ್ರದ ಸಿಂಧುತ್ವದ ಅವಧಿ ಮುಗಿದ ಕಾರಣ ಸ್ಥಗಿತಗೊಂಡಿವೆ ಅಥವಾ ಅವಧಿ ಮುಗಿದಿವೆ ಎಂದು ಪರಿಗಣಿಸಲಾಗುತ್ತದೆ. ಎನ್‌ಜಿಒಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಲು ವಿಫಲವಾಗಿದ್ದರಿಂದ ತಮ್ಮ ಎಸಿಆರ್‌ಎ ನೋಂದಣಿ ಕಳೆದುಕೊಂಡಿವೆ.

ಅವೇಕೆ ಎನ್ ಜಿ ಒಗಳು ಪರವಾನಗಿ ನವೀಕರಣಕ್ಕೆ ಅರ್ಜಿ ಹಾಕುತ್ತಿಲ್ಲ?

ಇಲ್ಲಿದೆ ಆಸಕ್ತಿಕರ ಉತ್ತರ. ಮೋದಿ ಸರ್ಕಾರ ಬಂದ ನಂತರ ವಿದೇಶಿ ಕೊಡುಗೆ ಸ್ವೀಕರಿಸುವ ನಿಟ್ಟಿನಲ್ಲಿ ನಿಯಮಗಳನ್ನು ಬಿಗಿ ಮಾಡಿದೆ. ಬಹಳ ಮುಖ್ಯವಾಗಿ ಎನ್ ಜಿ ಒ ಒಂದು ತಾನು ಯಾವ ಮುಖ್ಯ ಉದ್ದೇಶಕ್ಕಾಗಿ ಹಣ ಸಂಗ್ರಹಿಸುತ್ತಿದ್ದೇನೆ ಎಂಬುದನ್ನು ನಮೂದಿಸಿ ಹೆಚ್ಚಿನ ಪಾಲು ಹಣವನ್ನು ಅದಕ್ಕೇ ಖರ್ಚು ಮಾಡಿರುವ ಬಗ್ಗೆ ಲೆಕ್ಕ ಕೊಡಬೇಕು. ಅರ್ಥಾತ್, ಹಸಿವು ನೀಗಿಸುತ್ತೇನೆ ಎಂದು ಫಂಡ್ ಸ್ವೀಕರಿಸಿ ಅದನ್ನು ಮತಾಂತರದಂಥ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುವುದು ಈಗ ಕಷ್ಟವಾಗಿದೆ.

ಅಲ್ಲದೇ, ಸಂಸ್ಥೆಗಳ ಶೇ. 20ಕ್ಕಿಂತ ಹೆಚ್ಚು ಹಣ ಆಡಳಿತಾತ್ಮಕ ವೆಚ್ಚಕ್ಕೆ ವಿನಿಯೋಗವಾಗುವಂತಿಲ್ಲ ಎಂಬ ನಿಯಮವನ್ನೂ ವಿಧಿಸಿದೆ. ಉದಾಹರಣೆಗೆ, ಪರಿಸರದ ಉದ್ಧಾರಕ್ಕೆ ಎನ್ ಜಿ ಒ ನಡೆಸುತ್ತೇವೆ ಎಂದು ಫಂಡ್ ಸಂಗ್ರಹಿಸುವ ಸದಸ್ಯರು ನಂತರ ತಮ್ಮ ವಿಮಾನ ಪ್ರಯಾಣ ಇತ್ತಿತರ ಖರ್ಚುಗಳನ್ನೇ ತೋರಿಸಿ ಹಣ ವ್ಯಯಿಸಿದ್ದೇನೆ ಎನ್ನುವಂತಿಲ್ಲ! ಈ ಎಲ್ಲ ಕಾರಣದಿಂದ ಎನ್ ಜಿ ಒಗಳಿಗೆ ಯಾವುದೇ ಉದ್ದೇಶ ನಮೂದಿಸಿ ಇನ್ಯಾವುದೋ ರಾಜಕೀಯಕ್ಕೆ ಹಣ ಖರ್ಚು ಮಾಡುವುದು ಕಷ್ಟವಾಗಿದೆ.

ಅನರ್ಹವಾಗಿರುವ ಸಂಸ್ಥೆಗಳು ಯಾವೆಲ್ಲ?

ಆಕ್ಸ್ ಫ್ಯಾಮ್ ಇಂಡಿಯಾ ಟ್ರಸ್ಟ್, ಇಂಡಿಯನ್ ಯೂತ್ ಸೆಂಟರ್ಸ್ ಟ್ರಸ್ಟ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಟ್ಯುಬರ್‌ಕುಲೋಸಿಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿದಂತೆ ಹಲವು ಎನ್‌ಜಿಒಗಳು ಎಫ್ ಸಿ ಆರ್‌ ಎ ಪರವಾನಗಿ ಅವಧಿ ಮುಗಿದಿರುವ ಪಟ್ಟಿಯಲ್ಲಿ ಸೇರಿವೆ.

ಕಳೆದ ವರ್ಷದ ಆರಂಭದಲ್ಲಿ 2020 ಸೆಪ್ಟೆಂಬರ್ 29 ಮತ್ತು 2021 ಸೆಪ್ಟೆಂಬರ್ 30ರ ನಡುವೆ ಅವಧಿ ಮುಗಿಯುವ ಎನ್‌ಜಿಒಗಳ ಎಫ್ ಸಿ ಆರ್‌ ಎ ನೋಂದಣಿಯ ಸಿಂಧುತ್ವವನ್ನು 2021 ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು. ನಂತರ ಸರಕಾರವು ತಮ್ಮ ಎಫ್ ಸಿ ಆರ್‌ ಎ ಪರವಾನಗಿಗಾಗಿ ಅವಧಿ ಮುಗಿಯುತ್ತಿರುವ ಸಂಸ್ಥೆಗಳಿಗೆ ಸಕ್ರಿಯವಾಗಿ ಉಳಿಯಲು ನವೀಕರಣ ಅರ್ಜಿ ಸಲ್ಲಿಸಲು ತಿಳಿಸಿತ್ತು. ಆದಾಗ್ಯೂ ಮುಕ್ತಾಯ ಸಮೀಪಿಸಿರುವ 22,762 ಸಂಸ್ಥೆಗಳಲ್ಲಿ 6000 ಸಂಸ್ಥೆಗಳು ತಮ್ಮ ಎಸಿಆರ್‌ಎ ಪರವಾನಗಿಯ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ವಿಫಲವಾಗಿವೆ.

ಬಹುಶಃ, ನಿಮಗೆ ಈಗ ನಿಚ್ಚಳವಾಗಿದ್ದಿರಬಹುದು… ಕೆಲವು ‘ಆಂದೋಲನಜೀವಿ’ಗಳು ಮೋದಿ ಸರ್ಕಾರದ ಬಗ್ಗೆ ಏಕಿಷ್ಟು ದ್ವೇಷ ಹೊಂದಿವೆ ಅಂತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!