ಅಫ್ಘಾನಿಸ್ತಾನಕ್ಕೆ ಸಹಾಯಹಸ್ತ ಚಾಚಿದ ಭಾರತ: 5 ಲಕ್ಷ ಕೋವಿಡ್ ವ್ಯಾಕ್ಸಿನ್​ ​ ರವಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಫ್ಘಾನಿಸ್ತಾನಕ್ಕೆ ಭಾರತ 5 ಲಕ್ಷ ಕೋವಿಡ್ ವ್ಯಾಕ್ಸಿನ್​ ರವಾನಿಸಿದೆ. ಈ ಮೂಲಕ ಕಷ್ಟದಲ್ಲಿರುವ ರಾಷ್ಟ್ರಕ್ಕೆ ಮಾನವೀಯತೆಯ ಮೂಲಕ ನೆರವಿನ ಹಸ್ತ ಚಾಚಿದೆ.
ಈಗಾಗಲೇ 50 ಸಾವಿರ ಮೆಟ್ರಿಕ್ ಟನ್​ ಗೋಧಿ ಸೇರಿದಂತೆ ಅಗತ್ಯ ಜೀವ ರಕ್ಷಕ ಔಷಧವನ್ನು ಕಾಬೂಲ್​​ನಲ್ಲಿರುವ ಇಂದಿರಾ ಗಾಂಧಿ ಆಸ್ಪತ್ರೆಗೆ ಲಸಿಕೆ ಹಸ್ತಾಂತರ ಮಾಡಲಾಗಿದ್ದು, ಇದರ ಬೆನ್ನಲ್ಲೇ ಹೆಚ್ಚುವರಿಯಾಗಿ 5 ಲಕ್ಷ ಕೋವಿಡ್ ಡೋಸ್​ ಪೂರೈಸುವುದಾಗಿ ಹೇಳಿದೆ.
ಡಿಸೆಂಬರ್​ ತಿಂಗಳಲ್ಲಿ ಭಾರತ ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಅಫ್ಘಾನಿಸ್ತಾನಕ್ಕೆ 1.6 ಟನ್​ ವೈದ್ಯಕೀಯ ನೆರವು ನೀಡಿದ್ದು, ಇದೀಗ ಮತ್ತಷ್ಟು ಸಹಾಯಹಸ್ತ ಚಾಚಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!