ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚು ವಿದೇಶಿಗರು ಬಂದು ಹೋಗುವ ಗೋವಾದಲ್ಲಿ ವಿದೇಶಿ ಮಹಿಳೆಯ ಕೊಲೆ ಯತ್ನ ನಡೆದಿದೆ.
ಗೋವಾದ ರೆಸಾರ್ಟ್ ಒಂದರಲ್ಲಿ ಸಿಬ್ಬಂದಿಯೇ ಮಹಿಳೆಗೆ ಕಿರುಕುಳ ನೀಡಿದ್ದು, ಚಾಕುವಿನಿಂದ ಇರಿದಿದ್ದಾನೆ. ಡಚ್ ಮಹಿಳೆ ತನ್ನ ಟೆಂಟ್ನಲ್ಲಿ ಮಲಗಿದ್ದ ವೇಳೆ ಸಿಬ್ಬಂದಿಯೊಬ್ಬ ಬಂದಿದ್ದಾನೆ. ಕೈಯಲ್ಲಿ ಸೆಲೋ ಟೇಪ್ ಹಿಡಿದು ಬಂದಿದ್ದು, ಮಹಿಳೆಯನ್ನು ಹಾಸಿಗೆ ಮೇಲೆ ತಳ್ಳಿದ್ದಾನೆ.
ಅತ್ಯಾಚಾರಕ್ಕೆ ಯತ್ನಿಸುತ್ತಿರಬಹುದು ಎಂದು ಮಹಿಳೆ ಜೋರಾಗಿ ಕೂಗಿದ್ದು, ಹೆದರಿದ ಸಿಬ್ಬಂದಿ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಅಕ್ಕಪಕ್ಕದ ಟೆಂಟ್ನಲ್ಲಿದ್ದವರು ತಕ್ಷಣವೇ ಓಡಿಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ರೆಸಾರ್ಟ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.