ಕಾಂಗ್ರೆಸ್ ಸ್ಟೇರಿಂಗ್ ಕಮಿಟಿ ರಚನೆ, ರಾಜ್ಯದ ಮೂವರಿಗೆ ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದ ಬೆನ್ನಲ್ಲೇ ಹೊಸ ಸಮಿತಿ ರಚನೆ ಮಾಡಿದ್ದು, ಈ ಸಮಿತಿಯಲ್ಲಿ ರಾಜ್ಯದ ಮೂವರಿಗೆ ಅವಕಾಶ ಸಿಕ್ಕಿದೆ.

ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಇದೀಗ ಹೊಸತಾಗಿ ಸ್ಟೇರಿಂಗ್ ಕಮಿಟಿ ರಚಿಸಿದ್ದಾರೆ. ಎಐಸಿಸಿ ಹೊಸದಾಗಿ ರಚಿಸಿದ ಕಮಿಟಿಯಲ್ಲಿ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಾದ ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್‌ಗೆ ಸ್ಥಾನ ಸಿಕ್ಕಿದೆ.

47 ಸದಸ್ಯರ ಸ್ಟೇರಿಂಗ್ ಸಮಿತಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮನಮೋಹನ್ ಸಿಂಗ್‌ಗೆ ಸ್ಥಾನ ನೀಡಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!