ತಲೆಗೆ ರೇಷ್ಮೆ ರುಮಾಲು ಧರಿಸಿ ಮತ ಚಲಾಯಿಸಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ

ದಿಗಂತ ವರದಿ ವಿಜಯಪುರ:

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಕುಟುಂಬ ಸಮೇತ ಕೊಲ್ಹಾರ ಪಟ್ಟಣದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಎಸ್.ಕೆ. ಬೆಳ್ಳುಬ್ಬಿ ತಮ್ಮ ಧರ್ಮಪತ್ನಿ ಕಸ್ತೂರಿಬಾಯಿ ಹಾಗೂ ಪುತ್ರ ಚಂದ್ರಶೇಖರ್, ಮಗಳು, ಸೊಸೆಯೊಂದಿಗೆ ಕೊಲ್ಹಾರ ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 169 ರಲ್ಲಿ ಮತ ಚಲಾಯಿಸಿದರು.

ಎಸ್.ಕೆ. ಬೆಳ್ಳುಬ್ಬಿ ತಲೆಗೆ ರೇಷ್ಮೆ ರುಮಾಲು ಧರಿಸಿ ಮತ ಚಲಾಯಿಸಿ ಗಮನ ಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!