ಬ್ರ್ಯಾಂಡೆಡ್‌ ಬಟ್ಟೆ ಮೇಲೆ ಹೇನು, ತಿಗಣೆ : ಫೋಟೊ ನೋಡಿ ಬೆಚ್ಚಿಬಿದ್ದ ಗ್ರಾಹಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಲ್‌ಗಳಿಗೆ ತೆರಳಿ ಹೊಸ ಬಟ್ಟೆ ಕೊಳ್ಳೋದು ಅದೇನೋ ಖುಷಿ. ಅದರಲ್ಲೂ ಬ್ರ್ಯಾಂಡೆಡ್‌ ಬಟ್ಟೆ ಅಂದರೆ ಅದು ಕ್ಲೀನ್ ಹಾಗೂ ಸುಂದರವಾಗಿರುತ್ತದೆ ಅನ್ನೋದು ಸಾಮಾನ್ಯ ಅಭಿಪ್ರಾಯ. ಆದರೆ ನೀವು ಬ್ರ್ಯಾಂಡೆಡ್‌ ಬಟ್ಟೆ ಪ್ರಿಯರಾಗಿದ್ದರೆ ಈ ಸುದ್ದಿ ಓದಲೇಬೇಕು.

Imageಪ್ರತಿಷ್ಠಿತ ಎಚ್ ಆಂಡ್ ಎಮ್ ಬ್ರಾಂಡ್‌ನ ಶೋ ರೂಂ ಒಂದರ ಬಟ್ಟೆಗಳ ಮೇಲೆ ಹೇನು, ತಿಗಣೆ ಹಾಗೂ ಕೀಟಗಳು ಕಾಣಿಸಿವೆ. ಹೌದು, ನ್ಯೂಯಾರ್ಕ್‌ನ ವಲ್ಡ್ ಟ್ರೇಡ್ ಸೆಂಟರ್‌ನಲ್ಲಿರುವ ಎಚ್ ಆಂಡ್ ಎಮ್ ಬ್ರಾಂಚ್‌ನಲ್ಲಿ ಬಟ್ಟೆಗಳ ಮೇಲೆ ಹುಳಗಳು ಕಾಣಿಸಿದ್ದು, ಗ್ರಾಹಕರು ಮೂಗು ಮುರಿದಿದ್ದಾರೆ.

ಈ ರೀತಿ ಹುಳಗಳು ಇರೋ ಬಟ್ಟೆಗಳ ಫೋಟೊ ಒಂದು ವೈರಲ್ ಆಗಿದ್ದು, ಅಂಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿ ಪರಿಶೀಲನೆ ಮಾಡಲಾಗುತ್ತಿದೆ. ಹೊಸ ಬಟ್ಟೆಗಳ ಮೇಲೆ ಒಂದು ಧೂಳು ಕಾಣಿಸಿದರೂ ಬೇರೆ ಪೀಸ್ ಕೊಡಿ ಎನ್ನುವ ಗ್ರಾಹಕರು ಈ ರೀತಿ ಹುಳಗಳು ತುಂಬಿರೋ ಬಟ್ಟೆಯನ್ನು ಹೇಗೆ ಒಪ್ಪಿಯಾರು? ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್ ಆಗುತ್ತಿದ್ದು, ಮಾಲ್‌ಗಳಲ್ಲಿ ಬಟ್ಟೆ ಕೊಳ್ಳೋದಕ್ಕೆ ಜನ ಹಿಂದು ಮುಂದು ನೋಡ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!