ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಕೆ ಕೆನ್ ತನಾಕ, ವಿಶ್ವದ ಅತ್ಯಂತ ಹಿರಿಯ ಮಹಿಳೆ. ಇದೀಗ ಇವರಿಗೆ 119ನೇ ವರ್ಷದ ಹುಟ್ಟು ಹಬ್ಬದ ಸಂತಸ.
ಕೆನ್ ತನಾಕ, ಜಪಾನಿನ ಫುಕುವೋಕಾ ಪ್ರಿಫೆಕ್ಷರ್ ನಗರಲ್ಲಿರುವ ನರ್ಸಿಂಗ್ ಹೋಂ ನಲ್ಲಿ ವಾಸವಿದ್ದಾರೆ. ಜ.2ರಂದು ಕೆನ್ ಅವರು ತಮ್ಮ 119ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಮೂಲಕ ಇವರು ವಿಶ್ವದಲ್ಲಿ ಅತಿ ಹೆಚ್ಚು ವರ್ಷ ಬದುಕಿದ ಮಹಿಳೆ ಎಂಬ ಗಿನ್ನಿಸ್ ದಾಖಲೆ ಕೂಡ ಮಾಡಿದ್ದಾರೆ.
ಕೆನ್ ಅವರಿಗೆ ಚಾಕೊಲೇಟ್ ಹಾಗೂ ಕಾರ್ಬೊನೇಟೆಡ್ ಜ್ಯೂಸ್ ಗಳೆಂದರೆ ಬಲು ಇಷ್ಟವಂತೆ. ಮಾತನಾಡಲಾಗದ ಕಾರಣ ಸನ್ನೆಗಳ ಮೂಲ ನರ್ಸಿಂಗ್ ಹೋಂ ನ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಾರೆ.
ಇವರು ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಯನ್ನೂ ಮೆಟ್ಟಿ ನಿಲ್ಲುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಇವರ ಹುಟ್ಟುಹಬ್ಬದ ಸೆಲೆಬ್ರೇಷನ್ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ.