14 ವರ್ಷದ ಅಪ್ರಾಪ್ತೆಗೆ 28ರ ಯುವಕನೊಂದಿಗೆ ಬಲವಂತದ ಮದುವೆ: ನಾಲ್ವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
14 ಅಪ್ರಾಪ್ತ ಬಾಲಕಿಯನ್ನು ದುಪ್ಪಟ್ಟು ವಯಸ್ಸಿನ ಪುರುಷನಿಗೆ ಬಲವಂತವಾಗಿ ಮದುವೆ ಮಾಡಿಕೊಟ್ಟ ಬಾಲಕಿಯ ತಾಯಿ- ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಉತ್ತರಾಖಂಡ ಪೊಲೀಸರು ತಿಳಿಸಿದ್ದಾರೆ.
ರಿಷಿಕೇಶದ ಮಾನಸಾ ದೇವಿ ದೇವಸ್ಥಾನದಲ್ಲಿ 14 ವರ್ಷದ ಬಾಲಕಿಯನ್ನು 28 ವರ್ಷದ ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಪೊಲೀಸ್ ತಂಡ ದೇವಸ್ಥಾನಕ್ಕೆ ತಲುಪುವ ವೇಳೆಯಷ್ಟರಲ್ಲಿ ವಧು ಅಪ್ರಾಪ್ತ ವಯಸ್ಕಳಾಗಿರುವುದರಿಂದ ಮದುವೆ ಸಮಾರಂಭ ನಡೆಸಲು ದೇಗುಲದ ಅರ್ಚಕ ನಿರಾಕರಿಸಿದ್ದಾರೆ.
ಆ ವೇಳೆ ವರನ ಕಡೆಯವರು ವರನಿಂದ ಹುಡುಗಿಯ ಕೊರಳಿಗೆ ಬಲವಂತವಾಗಿ ಹಾರ ಹಾಕಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರ ತಂಡ ಶ್ಯಾಮ್‌ಪುರ ಫಟಕ್‌ ಎಂಬ ಘಟಕದಲ್ಲಿ ಆ ಗುಂಪನ್ನು ಹಿಡಿದು ಬಾಲಕಿಯನ್ನು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ, ಮೀರತ್ ಮೂಲದ ಆಕೆಯ ಪತಿ ಮತ್ತು ಇತರ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!