ʻಅಫ್ಘನ್‌ ಮೇಲಿನ ನಿರ್ಬಂಧ ಸಡಿಲಗೊಳಿಸಿʼ: ಅಮೆರಿಕಾಗೆ ತಾಲಿಬಾನ್‌ ಸರ್ಕಾರ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೀಕರ ಭೂಕಂಪ ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಅಫ್ಘನಿಸ್ತಾನ ಜನತೆಗೆ ಸಹಾಯ ಮಾಡುವಂತೆ ತಾಲಿಬಾನ್ ಸರ್ಕಾರ ಅಮೆರಿಕಕ್ಕೆ ಮನವಿ ಮಾಡಿದೆ. ಸ್ಥಗಿತಗೊಳಿಸಿರುವ ವಿದೇಶಿ ನಿಧಿಯನ್ನು ಬಿಡುಗಡೆ ಮಾಡುವಂತೆ ಕೋರಿದೆ. ಜೊತೆಗೆ  ತನ್ನ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವಂತೆ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖ್ವಿ ಮೀಡಿಯಾ ಮೂಲಕ ಅಮೆರಿಕಕ್ಕೆ ಮನವಿ ಮಾಡಿದೆ.

ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ಭೂಕಂಪ ಸಂತ್ರಸ್ತರಿಗೆ ಸಹಾಯವಾಗಲಿದೆ. ಹಾಗಾಗಿ ಈ ವರ್ಷದ ಫೆಬ್ರವರಿಯಲ್ಲಿ, ಅಫ್ಘಾನಿಸ್ತಾನದಲ್ಲಿ ಫ್ರೀಜ್ ಮಾಡಲಾದ 70,000 ಕೋಟಿ ರೂ.ಗಳಲ್ಲಿ 54,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಯುಎಸ್ ಅಧ್ಯಕ್ಷ ಜೋ ಬಿಡನ್ ಆದೇಶವನ್ನು ಹೊರಡಿಸಿದರು.  9/11 ದಾಳಿಯ ಸಂತ್ರಸ್ತರಿಗೆ ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವು ನೀಡಲು ಹಣವನ್ನು ಬಳಸಲು ಸೂಚನೆ ನೀಡಿದ್ದಾರೆ. ಅಫ್ಘಾನ್ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಲು ಯುಎನ್ ಏಜೆನ್ಸಿಗಳು ಈಗಾಗಲೇ ತಾಲಿಬಾನ್ ಸರ್ಕಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!