ಸಂಪತ್ತನ್ನು ಗಳಿಸಲು ದುಡಿಯಬೇಕು. ಹಾಗೇ ಹಣದ ಬಗ್ಗೆ ನಾವು ಆಲೋಚಿಸುವ ರೀತಿ, ಮಾತನಾಡುವ ಪದಗಳು ಕೂಡ ಮುಖ್ಯವಾಗುತ್ತವೆ. ಅದರಲ್ಲಿಯೂ ಹೆಣ್ಣು ಲಕ್ಷ್ಮಿಯಂತೆ. ಅವರು ಮಾಡುವ ಈ ಕೆಲಸಗಳಿಂದ ಸಂಪತ್ತನ್ನು ಜೀವನಕ್ಕೆ ಆಕರ್ಷಿಸಬಹುದಂತೆ ಹೇಗೆ ನೋಡಿ..
ಹಣದ ಬಗ್ಗೆ ನೀವು ಆಲೋಚಿಸುವ ರೀತಿ, ಆಡುವ ಮಾತುಗಳು ಬದಲಾಗಲಿ. ನಮ್ಮ ಬಳಿ ಹಣ ಇಲ್ಲ, ದುಡ್ಡು ಸಾಲೋದಿಲ್ಲ, ನಾವು ಬಡವರು ಇಂಥ ಮಾತುಗಳನ್ನು ಆಡದಿದ್ದರೆ ಲೇಸು. ನಮ್ಮ ಬಳಿ ಲಕ್ಷ್ಮಿ ಇದ್ದಾಳೆ, ಸದಾ ಇರುತ್ತಾಳೆ ಎನ್ನುವ ನಂಬಿಕೆ ಇಟ್ಟುಕೊಳ್ಳಿ.
ನಿಮ್ಮ ಪರ್ಸ್ ಅಥವಾ ಬ್ಯಾಗ್‌ನಲ್ಲಿ ಸದಾ ಹಣವನ್ನು ಇಟ್ಟುಕೊಳ್ಳಿ. ಎಟಿಎಂ ಕಾರ್ಡ್ ಅಲ್ಲ, ಎಟಿಎಂನಿಂದ ಹಣ ಡ್ರಾ ಮಾಡಿ ಬಂದು ಹಾರ್ಡ್ ಕ್ಯಾಶ್ ಇಟ್ಟುಕೊಳ್ಳಿ. ಪರ್ಸ್ ಯಾವಾಗಲು ಖಾಲಿ ಆಗಬಾರದು. ಹಣ ಅದರಲ್ಲೇ ಇಟ್ಟಿರಿ.
ನಿಮ್ಮ ದುಡಿಮೆಯಲ್ಲಿ ಶೇ. ಹತ್ತರಷ್ಟಾದ್ರೂ ನಿಮ್ಮ ಸೇವಿಂಗ್ಸ್ ಆಗಲಿ. ನಿಮ್ಮದೇ ಸಪರೇಟ್ ಆದ ಅಕೌಂಟ್ ಮಾಡಿಕೊಂಡು ಅದರಲ್ಲಿ ಹಣ ಹಾಕಿ. ಫೋನ್ ಪೇ, ಗೂಗಲ್ ಪೇ ಇನ್ನಿತರ ಪೇಗಳನ್ನು ಹಾಕದೇ ಫೋನ್ ಇಟ್ಕೊಳಿ. ಹಣ ಉಳಿಯುತ್ತದೆ.
ದುಡ್ಡನ್ನು ಖರ್ಚು ಮಾಡ್ತಾ ಅಯ್ಯೋ ನನ್ನ ದುಡ್ಡು ಹೋಯ್ತಲ್ಲಾ ಎಂದು ಸಿಟ್ಟಲ್ಲೋ, ಬೇಸರದಲ್ಲೋ ಖರ್ಚು ಮಾಡಬೇಡಿ. ಖುಷಿಯಿಂದ ಹಣಕ್ಕೆ ಧನ್ಯವಾದ ಹೇಳಿ ಬೀಳ್ಕೊಡಿ. ಅದು ಮತ್ತೆ ನಿಮ್ಮ ಬಳಿಯೇ ಬರುತ್ತದೆ.



