ಕೊವೀಡ್ ಬೂಸ್ಟರ್ ಡೋಸ್ ಪಡೆದವರಿಗೆ ನಾಲ್ಕನೇ ಡೋಸ್ ಬೇಡ : ಜಯದೇವ ಸಂಸ್ಥೆ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆದವರು ನಾಲ್ಕನೇ ಡೋಸ್ ಲಸಿಕೆಯನ್ನು ಪಡೆಡಯುವುದು ಬೇಡ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ನೀಡಿದೆ.

ಬೂಸ್ಟರ್‌ ಡೋಸ್‌ ಪಡೆದವರು ನಾಲ್ಕನೇ ಡೋಸ್‌ ತೆಗೆದುಕೊಳ್ಳಬೇಕೆ ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬಂದಿದ್ದವು, ಈ ಹಿನ್ನೆಲೆಯಲ್ಲಿ 350ಕ್ಕೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರ ಮೇಲೆ ಪ್ರಯೋಗ ನಡೆಸಲಾಗಿತ್ತು. ಬೂಸ್ಟರ್ ಡೋಸ್ ಲಸಿಕೆ ಪಡೆದ 12 ತಿಂಗಳ ಬಳಿಕವೂ 99.4 ಮಂದಿಯಲ್ಲಿ ರೋಗನಿರೋಧಕ ಶಕ್ತಿಯ ಲೆವೆಲ್​ ಉತ್ತಮವಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಧ್ಯಯನದ ಅನುಸಾರ ನಾಲ್ಕನೇ ಡೋಸ್ ಅಥವಾ 2ನೇ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಗತ್ಯತೆ ಇಲ್ಲ ಎಂದು ಹೇಳಬಹುದು. ಆದರೆ ಯಾರು ಇದುವರೆಗೂ ಬೂಸ್ಟರ್ ಡೋಸ್​ ಪಡೆದುಕೊಂಡಿಲ್ಲ, ಅವರು ಲಸಿಕೆ ಪಡೆದುಕೊಳ್ಳುವುದು ಉತ್ತಮ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!