60,000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲು ಚೆನ್ನೈ‌ ಉತ್ಪಾದನಾ ಘಟಕದ ಬಳಿ ಹಾಸ್ಟೆಲ್‌ ನಿರ್ಮಿಸುತ್ತಿದೆ ಫಾಕ್ಸ್‌ ಕಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ನಿರ್ಬಂಧಗಳಿಂದಾಗಿ ಚೀನಾದಲ್ಲಿರುವ ಐಫೋನ್‌ ತಯಾರಕ ಫಾಕ್ಸ್‌ ಕಾನ್‌ ಕಂಪನಿಯ ಉತ್ಪಾದನಾ ಘಟಕವು ಮುಚ್ಚಿರುವುದರಿಂದ ಅದು ಚೀನಾವನ್ನು ಹೊರತು ಪಡಿಸಿ ಭಾರತದ ಘಟಕದಲ್ಲಿ ಉತ್ಪಾದನೆ ಹೆಚ್ಚಿಸಲು ಚಿಂತಿಸಿದೆ ಎಂದು ಈ ಹಿಂದೆ ವರದಿಯಾಘಿತ್ತು. ಈಗ ಅದಕ್ಕೆ ಪೂರಕವಾದ ಬೆಳವಣಿಗೆಯೊಂದು ವರದಿಯಾಗಿದೆ. ಐಫೋನ್ ತಯಾರಕ ಫಾಕ್ಸ್‌ಕಾನ್ ಆಪಲ್ ಸಾಧನಗಳ ಉತ್ಪಾದನೆಯನ್ನು ಹೆಚ್ಚಿಸಲು ಚೆನ್ನೈನಲ್ಲಿರುವ ತನ್ನ ಉತ್ಪಾದನಾ ಘಟಕದ ಬಳಿ ಸುಮಾರು 60,000 ಉದ್ಯೋಗಿಗಳಿಗೆ ಹಾಸ್ಟೆಲ್‌ಗಳನ್ನು ನಿರ್ಮಿಸುತ್ತಿದೆ ಎಂದು ಎಕನಾಮಿಕ್‌ ಟೈಮ್ಸ್ ವರದಿಯೊಂದು ತಿಳಿಸಿದೆ. ಆಪಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಮತ್ತು ಚೀನಾದ ಹೊರತಾಗಿ ಉತ್ಪಾದನೆಯನ್ನು ಬಲಗೊಳಿಸಲು ಕಂಪನಿಯು ಚಿಂತಿಸುತ್ತಿದ್ದು ಈ ಹಿನ್ನೆಲೆಯಲ್ಲಿ ತಮಿಳುನಾಡಿನ 20 ಎಕರೆ ಜಾಗದಲ್ಲಿ ಬಿರುಸಿನ ನಿರ್ಮಾಣಕಾರ್ಯ ನಡೆಯುತ್ತಿದೆ ಎಂದು ವರದಿ ಹೇಳಿದೆ.

ಫಾಕ್ಸ್‌ಕಾನ್ ಶ್ರೀಪೆರಂಬದೂರಿನಲ್ಲಿರುವ ತನ್ನ ಸೌಲಭ್ಯದಲ್ಲಿ ಐಫೋನ್‌ಗಳನ್ನು ತಯಾರಿಸುತ್ತದೆ. ಕಂಪನಿಯು 15,000 ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದೆ, ಅವರಲ್ಲಿ ಹೆಚ್ಚಿನವರು ಮಹಿಳೆಯರು. ಮುಂದಿನ 18 ತಿಂಗಳಲ್ಲಿ ಉದ್ಯೋಗಿಗಳ ಸಂಖ್ಯೆ 70,000ಕ್ಕೆ ಏರುವ ನಿರೀಕ್ಷೆಯಿದೆ.

ಆಪಲ್ ಚೀನಾದ ಹೊರಗೆ, ವಿಶೇಷವಾಗಿ ಭಾರತ ಮತ್ತು ವಿಯೆಟ್ನಾಂನಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ನೋಡುತ್ತಿದೆ.

20,000 ಜನರಿಗೆ ಅವಕಾಶ ಕಲ್ಪಿಸುವ ಮೊದಲ ಹಾಸ್ಟೆಲ್ ಮುಂದಿನ 10 ತಿಂಗಳಲ್ಲಿ ಸಿದ್ಧವಾಗಲಿದೆ ಮೂಲಗಳ ವರದಿ ಉಲ್ಲೇಖಿಸಿದೆ. ಹಾಸ್ಟೆಲ್‌ಗಳ ಹೊರತಾಗಿ, ಕಂಪನಿಯು ತನ್ನ ಶ್ರೀಪೆರಂಬದೂರ್ ಸ್ಥಾವರದಲ್ಲಿ ಹೊಸ ಉತ್ಪಾದನಾ ಸೌಲಭ್ಯಗಳನ್ನು ನಿರ್ಮಿಸುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!