June 14, 2026
Sunday, June 14, 2026
spot_img

ಜೂ. 1ರಿಂದ ಮಹಿಳೆಯರಿಗೆ ಫ್ರೀ ಬಸ್, 3000 ರೂ ಗಿಫ್ಟ್: ಬಂಗಾಳ ಸರ್ಕಾರದ ಬಿಗ್ ಅನೌನ್ಸ್‌ಮೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾದಲ್ಲಿ ನಡೆದ ಪಶ್ಚಿಮ ಬಂಗಾಳ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಮಹಿಳೆಯರಿಗೆ ಮಾಸಿಕ ₹3,000 ಆರ್ಥಿಕ ನೆರವು ನೀಡುವ ‘ಅನ್ನಪೂರ್ಣ ಯೋಜನೆ’ಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದ್ದು, ಇದೇ ವೇಳೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನೂ ಘೋಷಿಸಲಾಗಿದೆ.

‘ಅನ್ನಪೂರ್ಣ ಯೋಜನೆ’ಗೆ ಗ್ರೀನ್ ಸಿಗ್ನಲ್

ಸಚಿವ ಅಗ್ನಿಮಿತ್ರ ಪಾಲ್ ಮಾಹಿತಿ ನೀಡಿದ್ದು, ಜೂನ್ 1ರಿಂದ ಯೋಜನೆ ಜಾರಿಗೆ ಬರಲಿದೆ ಎಂದರು. ರಾಜ್ಯದ ಅರ್ಹ ಮಹಿಳೆಯರು ಪ್ರತಿಮಾಸ ₹3,000 ನೆರವು ಪಡೆಯಲಿದ್ದು, ಅದೇ ದಿನದಿಂದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಕೂಡ ದೊರೆಯಲಿದೆ. ಜೊತೆಗೆ CAA ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೂ ಈ ಯೋಜನೆಯ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಹಳೆಯ OBC ಪಟ್ಟಿಯನ್ನು ರದ್ದು

ಇದೇ ವೇಳೆ ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಾಗಿ ಏಳನೇ ರಾಜ್ಯ ವೇತನ ಆಯೋಗ ರಚನೆಗೂ ಒಪ್ಪಿಗೆ ನೀಡಲಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆ, ಹಳೆಯ OBC ಪಟ್ಟಿಯನ್ನು ರದ್ದುಪಡಿಸಿ ಹೊಸ ಪರಿಶೀಲನಾ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.

ಜನರ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವುದಾಗಿ ಸರ್ಕಾರ ಘೋಷಿಸಿದ್ದು, ಇನ್ನು ಮುಂದೆ ಪ್ರತಿ 15 ದಿನಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !