September 29, 2026
Tuesday, September 29, 2026
spot_img

ಮೆಡಿಕಲ್‌ ಸೀಟ್‌ ಕೊಡಿಸ್ತೀನೆಂದು 45 ಲಕ್ಷ ರೂ.ವಂಚನೆ : ಮಾಜಿ ಸಚಿವ ಜಾಲಪ್ಪ ಸೊಸೆಗೆ ಐದು ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆಡಿಕಲ್‌ ಸೀಟು ಕೊಡಿಸ್ತೀನಿ ಎಂದು ನಂಬಿಸಿ 45 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ದಿ. ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಸೊಸೆ ನಾಗವೇಣಿಗೆ ಐದು ವರ್ಷ ಜೈಲು ಶಿಕ್ಷೆಯಾಗಿದೆ.

ಈ ಪ್ರಕರಣದಲ್ಲಿ ನಾಗವೇಣಿ ದೋಷಿ ಎಂದು ಬೆಂಗಳೂರಿನ 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಘೋಷಣೆ ಮಾಡಿದ್ದು, ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಈ ಪ್ರಕರಣದ ಪ್ರಮುಖ ಆರೋಪಿ, ಜಾಲಪ್ಪ ಅವರ ಪುತ್ರ ಜೆ. ನರಸಿಂಹಸ್ವಾಮಿ ವಿಚಾರಣೆ ಅವಧಿಯಲ್ಲಿಯೇ ಮೃತಪಟ್ಟಿದ್ದಾರೆ. ಹೀಗಾಗಿ ಅವರ ವಿರುದ್ಧದ ಪ್ರಕರಣ ಅಂತ್ಯಗೊಂಡಿತ್ತು. ಉಳಿದ ಆರೋಪಿಯಾಗಿದ್ದ ಪತ್ನಿ ನಾಗವೇಣಿ ವಿರುದ್ಧದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಹಿನ್ನೆಲೆ ಏನು?
ಪ್ರಕಾಶ್ ಕುಮಾರ್ ಎನ್ನುವ ವ್ಯಕ್ತಿಗೆ ಮೆಡಿಕಲ್‌ ಸೀಟ್‌ ಕೊಡಿಸ್ತೀನಿ ಎಂದು ನಂಬಿಸಿದ ನರಸಿಂಹಸ್ವಾಮಿ ಹಾಗೂ ನಾಗವೇಣಿ ಅವರಿಂದ 45 ಲಕ್ಷ ರೂಪಾಯಿ ಪಡೆದಿದ್ದರು. ಆನಂತರ ಯಾವುದೇ ಸೀಟ್‌ ಕೊಡಿಸಿರಲಿಲ್ಲ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

Must Read