ಮೆಣಸಿನಕಾಯಿ ಜಾಸ್ತಿ ತಿಂದರೆ ಏನಾಗುತ್ತೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಕಳೆದ ವಾರದ ಸಂಚಿಕೆಯಲ್ಲಿ ಸ್ಪರ್ಧಿಗಳ ನಡುವೆ ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್‌ ನೀಡಲಾಗಿತ್ತು. ಆಗ ಸ್ಪರ್ಧಿಗಳಾದ ವರ್ತೂರು ಸಂತೋಷ್‌ ಮತ್ತು ತನಿಷಾ ತಲಾ 20 ಮೆಣಸಿನಕಾಯಿಗಳನ್ನು ತಿಂದು ಟಾಸ್ಕ್‌ ಅನ್ನು ಗೆದ್ದರು.
ಅದರೆ ಇಷ್ಟೊಂದು ಮೆಣಸಿನಕಾಯಿ ತಿನ್ನುವುದು ಒಳ್ಳೆಯದಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು.

ನಿಜ ಹೇಳಬೇಕೆಂದರೆ ಸ್ವಲ್ಪ ಕಾರ ತಿಂದರೆ ಸಾಕು ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅಂತದ್ರಲ್ಲಿ 20 ಹಸಿಮೆಣಸಿನ ತಿನ್ನೋದು ಅಂದ್ರೆ ಸುಮ್ನೆ ಅಲ್ಲ. ಅಷ್ಟೊಂದು ಮೆಣಸಿನಕಾಯಿ ತಿಂದ ಬಳಿಕ ಮಲವಿಸರ್ಜನತೆ ಹೋದಾಗ ಉರಿ, ಹೊಟ್ಟೆ ಉರಿ, ಅದಾಗ್ಯೂ ಅಸಿಡಿಟಿ ಇರುವವರು ಹೊಟ್ಟೆ ನೋವಿನಿಂದ ಒದ್ದಾಡಿಬಿಡ್ತಾರೆ. ಹಾಗಾಗಿ ಟಾಸ್ಕ್‌ ಹೆಸರಿನಲ್ಲಿ ಮೆಣಸಿನಕಾಯಿ ಸೇವನೆಯು ಆರೋಗ್ಯಕ್ಕೆ ತುಂಬಾನೆ ಅಪಾಯಕಾರಿ. ಈ ರೀತಿಯಾಗಿ ಮೆಣಸಿನಕಾಯಿ ತಿಂದರೆ ಮೈ ಬಿಸಿಯಾಗುತ್ತೆ, ಉರಿ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

ಅದಲ್ಲದೆ ಅತಿ ಹೆಚ್ಚು ಖಾರ ತಿನ್ನೋದ್ರಿಂದ ಅಲ್ಸರ್‌ ಸಮಸ್ಯೆ, ಜೀರ್ಣಕ್ರಿಯೆಗೆ ತೊಂದರೆ, ವಾಂತಿ ಬೇಧಿ, ಮಾನಸಿಕ ಒತ್ತಡ, ಬಾಯಿ ಹುಣ್ಣು, ಮೈ ಬೆವರುವಿಕೆ ಸಮಸ್ಯೆಗಳು ಕಂಡುಬರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!