’40 ಕೋಟಿ ಜನ ಪ್ರಾಣತ್ಯಾಗ ಮಾಡಿದ್ದಕ್ಕೆ ಸ್ವಾತಂತ್ರ್ಯ ಬಂತು, 140ಕೋಟಿ ಜನ ಪಣತೊಟ್ಟರೆ ದೇಶ ಸಮೃದ್ಧವಾಗಲಿದೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಂದು ಜನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರಿಂದ ಸ್ವಾತಂತ್ರ್ಯ ನಮ್ಮದಾಯಿತು, ಇಂದು ನೀವು ದೇಶಕ್ಕಾಗಿ ಬದುಕಿ, ದೇಶವು ಸಮೃದ್ಧಿಗೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

78ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ನಮ್ಮ ಪೂರ್ವಜರ ರಕ್ತ ನಮ್ಮಲ್ಲಿ ಹರಿಯುತ್ತಿದೆ ಅದು ಖುಷಿಯ ವಿಚಾರ.

ಅಂದು ಕೇವಲ 40 ಕೋಟಿ ಜನರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು, ಇಂದು ನಾವು 140 ಕೋಟಿ ಜನರಿದ್ದೇವೆ ನಾವೆಲ್ಲರೂ  ಒಂದೇ ಅಂಕಲ್ಪ, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಮುನ್ನಡೆದರೆ ಖಂಡಿತವಾಗಿ ನಮ್ಮ ಮುಂದೆ ಬರುವ ಯಾವುದೇ ಸವಾಲನ್ನು ಎದುರಿಸುವ ಶಕ್ತಿ ನಮಗೆ ಬರುತ್ತದೆ ಎಂದು ಮೋದಿ ಹೇಳಿದರು.

ಇಂದು ತಮ್ಮ ಜೀವನದುದ್ದಕ್ಕೂ ಹೋರಾಡಿದ ಭಾರತಮಾತೆಯ ಅಸಂಖ್ಯಾತ ಭಕ್ತರಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ. ನಮ್ಮ ರೈತರು, ಸೈನಿಕರು ಮತ್ತು ಯುವಕರ ಸ್ವಾತಂತ್ರ್ಯದ ಬಗೆಗಿನ ಧೈರ್ಯ ಮತ್ತು ಭಕ್ತಿ ಜಗತ್ತಿಗೆ ಸ್ಪೂರ್ತಿದಾಯಕ ಘಟನೆಯಾಗಿದೆ. ಸ್ವಾತಂತ್ರ್ಯದ ಮೊದಲು, 40 ಕೋಟಿ ದೇಶವಾಸಿಗಳು ಉತ್ಸಾಹವನ್ನು ತೋರಿಸಿದರು ಮತ್ತು ಸಂಕಲ್ಪದೊಂದಿಗೆ ಮುನ್ನುಗ್ಗಿದ್ದರು ಎಂದು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!