Sunday, December 4, 2022

Latest Posts

ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಗೆ ನೊಬೆಲ್ ಸಾಹಿತ್ಯ​ ಪ್ರಶಸ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿಯ ಸಾಹಿತ್ಯ ಕ್ಷೇತ್ರಕ್ಕೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ನೊಬೆಲ್ ಅನ್ನು ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಪಡೆದುಕೊಂಡಿದ್ದಾರೆ. ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ವಿಜೇತರನ್ನು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಘೋಷಿಸಿದರು.

ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದ್ದು, ಇದೀಗ ಫ್ರೆಂಚ್ ಬರಹಗಾರ ಅನ್ನಿ ಎರ್ನಾಕ್ಸ್ ಅವರಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಎರ್ನಾಕ್ಸ್( 82) ಅವರ ಬರಹವು ‘ಧೈರ್ಯ ಮತ್ತು ಕ್ಲಿನಿಕಲ್ ತೀಕ್ಷ್ಣತೆಗೆ ಅವರು ವೈಯಕ್ತಿಕ ಸ್ಮರಣೆಯ ಬೇರುಗಳು, ಪ್ರತ್ಯೇಕತೆಗಳು ಮತ್ತು ಸಾಮೂಹಿಕ ನಿರ್ಬಂಧಗಳನ್ನು ಬಹಿರಂಗಪಡಿಸುತ್ತಾರೆ’ ಎಂದು ನೊಬೆಲ್ ಸಮಿತಿ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!