September 22, 2026
Tuesday, September 22, 2026
spot_img

ಹಿಂಗ್ ಮಾರಾಟಕ್ಕೆ FSSAI ಬ್ರೇಕ್: ಎವರೆಸ್ಟ್, ಲಾಲ್ಜಿ ಗೋಧೂ ಕಂಪನಿಗಳಿಗೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರ ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಹಾಗೂ ಲಾಲ್ಜಿ ಗೋಧೂ ಆ್ಯಂಡ್ ಕಂಪನಿ ತಯಾರಿಸುವ ಕಾಂಪೌಂಡೆಡ್ ಹಿಂಗ್‌ ಮಾರಾಟವನ್ನು FSSAI ನಿಷೇಧಿಸಿದೆ. ಜತೆಗೆ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಸ್ವಯಂಪ್ರೇರಿತವಾಗಿ ವಾಪಸ್ ಪಡೆಯುವಂತೆ 2 ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

ಎವರೆಸ್ಟ್ ನಲ್ಲಿ ಗುಣಮಟ್ಟದ ಸಮಸ್ಯೆ

ಎವರೆಸ್ಟ್‌ನ ಹಿಂಗ್ ಮಾದರಿಗಳಲ್ಲಿ ಆಲ್ಕೋಹಾಲ್ ಸೊಲ್ಯೂಬಲ್ ಎಕ್ಸ್‌ಟ್ರಾಕ್ಟ್ ಕನಿಷ್ಠ ಶೇ.5 ಇರಬೇಕಿದ್ದು, ಹಳದಿ ಹಾಗೂ ಕಪ್ಪು ಹಿಂಗ್ ಮಾದರಿಗಳಲ್ಲೂ ಕ್ರಮವಾಗಿ ಶೇ.3.29 ಮತ್ತು ಶೇ.4.4 ಪ್ರಮಾಣ ಕಂಡುಬಂದಿದೆ. ನ್ಯೂನತೆಗಳನ್ನು ಸರಿಪಡಿಸದಿದ್ದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು FSSAI ಸಂಸ್ಥೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:

ಲಾಲ್ಜಿ ಗೋಧೂ ಹಿಂಗ್‌ನಲ್ಲೂ ಅಕ್ರಮ

ಲಾಲ್ಜಿ ಗೋಧೂ ಕಂಪನಿ ಬಳಸುತ್ತಿದ್ದ ಆರು ಬಗೆಯ ಕಚ್ಚಾ ಹಿಂಗ್‌ ಮಾದರಿಗಳಲ್ಲೂ ಸಮಸ್ಯೆ ಪತ್ತೆಯಾಗಿದೆ. ಇವುಗಳಲ್ಲಿ ಶೇ.15ರಿಂದ 32ರವರೆಗೆ ಸ್ಟಾರ್ಚ್ ಇರುವುದನ್ನು ಪರೀಕ್ಷೆಗಳು ಬಹಿರಂಗಪಡಿಸಿವೆ. ಹೀಗಾಗಿ ಮುಂದಿನ ಆದೇಶ ಬರುವವರೆಗೂ ಹಿಂಗ್‌ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !