ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ ಇರಲಿದೆ, ಜೊತೆಗೆ ನಾನು ಸತ್ತರೂ ಮಂಡ್ಯ ಬಿಡೋ ಮಾತೇ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಗೆ ಬದಲಾವಣೆ ಅಗತ್ಯವಿದೆ. ಕಳೆದ ನಾಲ್ಕು ವರ್ಷದಿಂದ ಬಿಜೆಪಿ ನನಗೆ ಬೆಂಬಲ ನೀಡಿದೆ, ಹೀಗಾಗಿ ಇಂದು ರಾಜಕೀಯದಲ್ಲಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದೇನೆ ಎಂದಿದ್ದಾರೆ.
ಸ್ವತಂತ್ರ ಸಂಸದೆಯಾಗಿ ಬೇರೆ ಪಕ್ಷಕ್ಕೆ ಸೇರಲು ಸಂಸದೀಯ ಕಾನೂನು ತೊಡಕುಗಳಿವೆ, ಗೆದ್ದ ಆರು ತಿಂಗಳೊಳಗೆ ಯಾವುದಾದರೂ ಪಕ್ಷ ಸೇರಬೇಕು ಇಲ್ಲವಾದರೆ ಸಂಸದೆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಹಾಗಾಗಿ ಬಿಜೆಪಿಗೆ ಬೆಂಬಲ ನೀಡುತ್ತೇನೆ ಆದರೆ ಪಕ್ಷಕ್ಕೆ ಸೇರೋದಿಲ್ಲ ಎಂದು ಹೇಳಿದ್ದಾರೆ.