ಜಿ-20 ಶೃಂಗಸಭೆ: ಹೊಸ ಲೋಗೋ,ಥೀಮ್, ವೆಬ್ ಸೈಟ್ ಅನಾವರಣಗೊಳಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ-20 ಶೃಂಗಸಭೆಯ ಲಾಂಛನ, ಥೀಮ್ ಮತ್ತು ವೆಬ್ಸೈಟ್’ನ್ನ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅನಾವರಣಗೊಳಿಸಿದರು.

ಅನಾವರಣದ ನಂತ್ರ ಮಾತನಾಡಿದ ಪ್ರಧಾನಿ ಮೋದಿ , ಭಾರತದ ಜಿ-20 ಅಧ್ಯಕ್ಷರ ಐತಿಹಾಸಿಕ ಸಂದರ್ಭದಲ್ಲಿ ನಾನು ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ‘ವಸುಧೈವ ಕುಟುಂಬಕಂ’ ವಿಶ್ವದ ಬಗ್ಗೆ ಭಾರತದ ಸಹಾನುಭೂತಿಯ ಸಂಕೇತವಾಗಿದೆ. ವಿಶ್ವವನ್ನು ಒಗ್ಗೂಡಿಸುವಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನಂಬಿಕೆಯನ್ನು ಕಮಲವು ಚಿತ್ರಿಸುತ್ತದೆ ಎಂದರು.

ಜಿ 20 ಅಧ್ಯಕ್ಷೀಯ ಅವಧಿಯಲ್ಲಿ,ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ 32 ವಿವಿಧ ವಲಯಗಳಲ್ಲಿ ಸುಮಾರು 200 ಸಭೆಗಳನ್ನು ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!