ಹೊಸದಿಗಂತ ವರದಿ, ಗದಗ:
ಕುರಿಗಳನ್ನು ಮೇಯಿಸುತ್ತ ಸಾಗುತ್ತಿದ್ದಾಗ ವಿದ್ಯುತ್ ಟ್ರಾನ್ಸ್ ಪರ್ಮರ ಹತ್ತಿರ ಇದ್ದ ಕುರಿಗಳನ್ನು ಓಡಿಸುವ ಸಂದರ್ಭದಲ್ಲಿ ವಿದ್ಯುತ್ ತಗಲಿ ಸಂಚಾರಿ ಕುರಿಗಾಯಿ ಯುವಕನೊಬ್ಬ ಮೃತಪಟ್ಟ ಘಟನೆ ನಗರದ ಹೊರವಲಯದ ಆರ್. ಟಿ. ಓ. ಆಫೀಸ್ ಹತ್ತಿರವಿರುವ ಕೆ ಎಚ್ ಬಿ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.
ಅಂಜುಮನ್ ಕಾಲೇಜ್ ನಿಂದ ಕಳಸಾಪುರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಆರ್ ಟಿಓ ಕಚೇರಿ ಹತ್ತಿರದ ಕೆ ಎಚ್ ಬಿ ಕಾಲೋನಿಯಲ್ಲಿ ಕುರಿಗಳನ್ನು ಕಾಯುತ್ತಿದ್ದ ಚಿಕ್ಕೋಡಿ ಜಿಲ್ಲೆಯ ವಾಳಿಕಿ ಗ್ರಾಮದ ವಿಠ್ಠಲ ಮಲ್ಲಪ್ಪ ಹಿರೇಕುಡಿ (21) ಸಂಚಾರಿ ಕುರಿಗಾಯಿ ಟ್ರಾನ್ಸ್‌ಫರ್ಮರ ಹತ್ತಿರ ಕುರಿಗಳನ್ನು ಓಡಿಸುವ ಸಂದರ್ಭದಲ್ಲಿ ವಿದ್ಯುತ್ ತಗಲಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ ನಂತರ ಸ್ಥಳಕ್ಕಾಗಿಸಿದ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಅನ್ನು ಸ್ಥಗಿತಗೊಳಿಸಿದರು. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.