ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋ ಮಹತ್ವಾಕಾಂಕ್ಷೆಯ ಮಾನವಹರಿತ ಗಗನಯಾನದ ಮೊದಲ ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ.
ಇಂದು ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ.
ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿರುವ ಇಸ್ರೋ, ನೌಕೆಯನ್ನು ಭೂಮಿಯಿಂದ 17.ಕಿಮೀ ಎತ್ತರಕ್ಕೆ ಹಾರಿದೆ. ಸದ್ಯ ನೌಕೆ ಸಮುದ್ರಕ್ಕೆ ಬಿದ್ದಿದೆ. ಇದನ್ನು ಸೇಫ್ ಲ್ಯಾಂಡಿಂಗ್ ಎನ್ನಲಾಗಿದೆ.
ಬೆಳಗ್ಗೆ 8:30 ಕ್ಕೆ ಉಡಾವಣೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ ಇದೀಗ ಉಡಾವಣೆ ಮಾಡಲಾಗಿದ್ದು, ಟೆಸ್ಟ್ ಫ್ಲೈಟ್ ವೆಹಿಕಲ್ ಉಡಾವಣೆ ಮಾಡಲಾಗಿದೆ.
ಎಸ್ಕೇಪ್ ಸಿಸ್ಟಮ್ ಗಗನಯಾನ ಯೋಜನೆಯ ಬಹುದೊಡ್ಡ ಭಾಗವಾಗಿದೆ, ಡೈನಾಮಿಕ್ ಪ್ರೆಶರ್ ಹಾಗೂ ಟ್ರಾನ್ಸಾನಿಕ್ ಕಂಡೀಷನ್‌ಗಳಲ್ಲಿ ಇದು ಕಾರ್ಯನಿರ್ವಹಿಸಬೇಕಿದ್ದು, ಇಂದು ಇಸ್ರೋ ಪರೀಕ್ಷೆ ನಡೆಸಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಯಲಿದ್ದು, ಇದು ಮೊದಲನೆಯ ಪ್ರಯೋಗವಾಗಿದೆ.