ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು..ಇದನ್ನು ದಿನನಿತ್ಯ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಸೊಪ್ಪಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಪ್ರೊಟೀನ್ ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದರಲ್ಲೂ ಇವುಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇಷ್ಟೆಲಾ ಆರೋಗ್ಯಕಾರಿ ಸೊಪ್ಪು ಒಂದು ದಿನಕ್ಕೇ ಬಾಡಿ ಹೋಗುತ್ತದೆ. ಸೊಪ್ಪು ಬಾಡದಂತೆ ಸದಾ ತಾಜಾವಾಗಿರುಲು ಕೆಲ ಟಿಪ್ಸ್ ನೋಡೋಣ.
- ಸೊಪ್ಪಿನಲ್ಲಿ ಹಾಳಾದ ಎಲೆಗಳನ್ನು ತೆಗೆದು ನಂತರ ಅದನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ರೆಫ್ರಿಜರೇಟರ್ನಲ್ಲಿ ಇರಿಸಿ.
- ಸೊಪ್ಪನ್ನು ಕತ್ತರಿಸಿ ಜಿಪ್ ಲಾಕ್ ಬ್ಯಾಗ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಎಲೆಗಳು ದೀರ್ಘಕಾಲ ತಾಜಾವಾಗಿರುತ್ತವೆ.
- ಪಾಲಕ್ ಸೊಪ್ಪನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಬೇಕು, ಇದು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುವ ಹಣ್ಣುಗಳಿಂದ ದೂರದಲ್ಲಿ ದೀರ್ಘಕಾಲ ತಾಜಾವಾಗಿರುವಂತೆ ನೋಡಿಕೊಳ್ಳುತ್ತದೆ.
- ಒಂದು ಬಟ್ಟೆ ತೆಗೆದುಕೊಂಡು ತಣ್ಣೀರಲ್ಲಿ ಅದ್ದಿ, ನೀರನ್ನು ಹಿಂಡಿ ಅದರಲ್ಲಿ ಸೊಪ್ಪುನ್ನು ಇಟ್ಟರೂ ಬೇಗ ಬಾಡುವುದಿಲ್ಲ.
- ಸೊಪ್ಪು ತಂದ ಕೂಡಲೇ ನೀರಲ್ಲದಂತೆ ಕೊಡವಿ ಹೆಚ್ಚಿನ ತೇವಾಂಶ ಇರದಂತೆ ನೋಡಿಕೊಳ್ಳಿ
- ತಂದ ಸೊಪ್ಪನ್ನು ಹಾಗೆಯೇ ಇಡದೆ ಅದನ್ನು ಬೇರು, ಕೊಳತ ಎಲೆಗಳಿದ್ದರೆ ಎಲ್ಲವನ್ನೂ ಸ್ವಚ್ಛಗೊಳಿಸಿ ನ್ಯೂಸ್ ಪೇಪರ್‌ನಲ್ಲಿ ಸುತ್ತಿಡಿ
ಹೀಗೆ ಮಾಡಿದರೆ ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿರುತ್ತದೆ..ನೀವೂ ಟ್ರೈ ಮಾಡಿ