ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಖೇಶ್ ಅಂಬಾನಿಯ ಒಡೆತನದ ರಿಲಾಯನ್ಸ್ ರಿಟೇಲ್ಸ್ ಅದಾಗಲೇ ಜವಳಿ ಉದ್ಯಮದಲ್ಲಿದೆ. ಅದೇ ವಿಭಾಗದಲ್ಲಿ ಲಕ್ಸುರಿ ಎಂದು ಪರಿಗಣಿಸಬಹುದಾದ, ತೊಂಬತ್ತರ ದಶಕದ ನಂತರ ಹುಟ್ಟಿದವರ ಫ್ಯಾಶನ್ ಖಯಾಲಿಗಳನ್ನು ಪೂರೈಸುವ ವಸ್ತ್ರ ಮತ್ತು ಲೈಫ್ ಸ್ಟೈಲ್ ಸರಕು ವಿಭಾಗದಲ್ಲೂ ರಿಲಾಯನ್ಸ್ ರಿಟೇಲ್ಸ್ ಈಗ ಹೆಜ್ಜೆ ಇಟ್ಟಿದೆ.
ಅಜೋರ್ಟ್ ಎಂಬ ಬ್ರಾಂಡ್ ಮೂಲಕ ಅದು ಬೆಂಗಳೂರಿನಲ್ಲಿ ಮಳಿಗೆ ತೆರೆದಿದ್ದು ಇದೇ ವಿಭಾಗದಲ್ಲಿರುವ ಬ್ರಾಂಡುಗಳಾದ ಜರಾ, ಮ್ಯಾಂಗೊ ಇತ್ಯಾದಿಗಳಿಗೆ ಈಗ ರಿಲಾಯನ್ಸ್ ಪೈಪೋಟಿ ನೀಡಲಿದೆ. ಈ ಲೈಫ್ ಸ್ಟೈಲ್ ವಿಭಾಗದಲ್ಲಿ ಧಿರಿಸುಗಳ ಬೆಲೆ ಹೆಚ್ಚಿನದ್ದಾಗಿರುತ್ತದೆ. ಆದರೆ ಹೊಸ ತಲೆಮಾರಿನವರ ಟ್ರೆಂಡ್ ಬಯಕೆಗಳನ್ನು ಪೂರೈಸುವುದರ ಜತೆಗೆ, ತಂತ್ರಜ್ಞಾನಾಧರಿತ ಟ್ರಯಲ್ ಕೋಣೆಗಳಂಥ ಹೊಸ ಅನುಭವಗಳನ್ನು ಈ ಬಗೆಯ ಪ್ರೀಮಿಯಂ ಮಳಿಗೆಗಳು ಕೊಡುತ್ತವೆ.