ರವಿಶಂಕರ್ ಗುರೂಜಿ ಅವರಿಗೆ ಗಾಂಧಿ ಶಾಂತಿ ಯಾತ್ರಿ ಪ್ರಶಸ್ತಿ ಪ್ರದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾತ್ಮಾ ಗಾಂಧಿ ಮತ್ತು ಡಾ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಪ್ರತಿಪಾದಿಸಿದ ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಹರಡಲು ಆರ್ಟ್‌ ಆಫ್‌ ಲೀವಿಂಗ್‌ ನ ಶ್ರೀ ರವಿಶಂಕರ್ ಗುರುಜಿಯವರು ನಡೆಸಿದ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಅಟ್ಲಾಂಟಾದಲ್ಲಿ ಗಾಂಧಿ ಶಾಂತಿ ತೀರ್ಥಯಾತ್ರೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಅಮೇರಿಕದ ಗಾಂಧಿ ಫೌಂಡೇಶನ್ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ.ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಸೋದರಳಿಯ ಐಸಾಕ್ ಫಾರಿಸ್ ಮತ್ತು ಅಟ್ಲಾಂಟಾದಲ್ಲಿ ಭಾರತದ ಕಾನ್ಸುಲ್ ಜನರಲ್ ಸ್ವಾತಿ ಕುಲಕರ್ಣಿ ಅವರ ಸಮ್ಮುಖದಲ್ಲಿ ರವಿಶಂಕರ್ ಅವರಿಗೆ ಪ್ರದಾನ ಮಾಡಲಾಯಿತು.
ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್‌ ಗುರೂಜಿ ಅವರ ಅತ್ಯುತ್ತಮ ಸೇವೆ ಮತ್ತು ಜಗತ್ತಿನಲ್ಲಿ ಬದಲಾವಣೆಯನ್ನು ತರಲು ನೀಡಿದ ಮಾನವೀಯ ಕೊಡುಗೆಗಾಗಿ ಈ ಪ್ರಶಸ್ತಿ ಸಂದಿದೆ. ಅವರು ಬುದ್ಧಿವಂತಿಕೆ, ಒಳನೋಟ ಮತ್ತು ಸ್ಫೂರ್ತಿಯ ಮೂಲಕ ಗಾಂಧಿ ಪ್ರತಿಪಾದಿಸಿದ್ದ ಶಾಂತಿಯ ಮಾರ್ಗದಲ್ಲಿ ಮುನ್ನಡೆದಿದ್ದಾರೆ ಎಂದು ಪ್ರತಿಷ್ಠಾನ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!