ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ಈ ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭಿಸಿದವರೇ ಕಾಂಗ್ರೆಸ್ಸಿನವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ದಿಂಬೂ ಬಿಡಲಿಲ್ಲ, ಹಾಸಿಗೆಯನ್ನು ಬಿಡಲಿಲ್ಲ, ನೆಲವನ್ನು ಬಿಡಲಿಲ್ಲ, ನೀರನ್ನು ಬಿಡಲಿಲ್ಲ, ಅವರು ಭ್ರಷ್ಟಾಚಾರ ಕುರಿತು ಮಾತನಾಡುವ ಹಕ್ಕೆ ಇಲ್ಲ. ಭ್ರಷ್ಟಾಚಾರ ಕುರಿತು ಮಾತನಾಡಿ ಚುನಾವಣೆಗೆ ಹೋಗಿದ್ದೀರಿ ಜನತೆ ನಿಮ್ಮನ್ನು ತಿರಸ್ಕರಿಸಿದ್ದಾರೆ ಎಂದರು.
ಸರ್ಕಾರ ಮಾಡಲು ಹೊರಟಿರುವ ಜನೋತ್ಸವ ಭ್ರಷ್ಟಾಚಾರದ ಉತ್ಸವ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ಮೇಲಿನಂತೆ ಖಾರವಾಗಿ ಪ್ರತಿಕ್ರೀಯೆ ನೀಡಿದರು. ಅವರು ಸಿದ್ದರಾಮೋತ್ಸವ ಆಚರಣೆ ಸಂದರ್ಭದಲ್ಲಿ ನಾವೂ ಸಿದ್ದರಾಮೋತ್ಸವವಲ್ಲ ಅದು ಭ್ರಷ್ಟಾಚಾರೋತ್ಸವ ಎಂದು ನಾವೂ ಹೇಳಬಹುದಾಗಿತ್ತು. ಹಾಗೇ ನಾವು ಹೇಳಲಿಲ್ಲ. ಆ ಮಟ್ಟಿಕ್ಕೆ ಇಳಿಯಲೂ ಬಾರದು. ಸಹಜವಾಗಿ ಜನತೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಐತಿಹಾಸಿಕ ಪುರುಷರ ಬಗ್ಗೆ ಎಲ್ಲ ದೇಶಗಳಲ್ಲಿ, ಎಲ್ಲ ಕಾಲಗಳಲ್ಲಿಯೂ ಪರ ವಿರೋಧ ವ್ಯಕ್ತವಾಗುತ್ತಿರುತ್ತದೆ. ಅದು ಯಾವ ಮಟ್ಟದಲ್ಲಿ ಯಾವ ರೀತಿ ಇರಬೇಕೆನ್ನುವುದು ಸಾರ್ವಜನಿಕ ವಲದಲ್ಲಿರುವ ನಾವು ಮೊದಲು ಅರ್ಥಮಾಡಿಕೊಳ್ಳಬೇಕು ಎಂದರು.
ಸಾವರ್ಕ್‌ರ ಕುರಿತು ಮಾಜಿ ಪ್ರಧಾನಿ ಇಂದಿರಾಗಾಧಿಯವರೇ ಪ್ರಶಂಸೆ ಮಾಡಿದ್ದಾರೆ. ಅವರೊಬ್ಬ ದೇಶದ ಶ್ರೇಷ್ಟ ಪುತ್ರರು ಎಂದು ಲಿಖಿತವಾಗಿ ಹೇಳಿದ್ದಾರೆ. ಅವರಲ್ಲಿ ಇರುವಂತಹ ಮಾಹಿತಿ ಹಾಗೂ ಅನುಭವದಿಂದ ವಿಶ್ಲೇಷಣೆ ಆಗುತ್ತದೆ. ಅದನ್ನು ಎಷ್ಟರ ಮಟ್ಟಿಗೆ ತಗೆದುಕೊಂಡು ಹೋಗಬೇಕೆನ್ನುವುದು ನಾಯಕರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಜನರಲ್ಲಿ ಗೊಂದಲ ಉಂಟು ಮಾಡುವುದು, ಒಂದು ವರ್ಗಕ್ಕೆ ಮನಸ್ಸು ನೂವುಂಟು ಮಾಡುವದನ್ನು ಆದಷ್ಟು ದೂರವಿಡಬೇಕು, ಟಿಪ್ಪು ಹಾಗೂ ಆವರ್ಕ್‌ರ್ ಬಗ್ಗೆ ವಿವಾದಗಳಿಗೆ, ಐತಿಹಾಸಿಕವಾಗಿ ನಾವಿಲ್ಲದ ಸಂದರ್ಭದಲ್ಲಿನ ಘಟನೆಗಳವು. ಇಂದಿನ ಪ್ರಸ್ತುತ ಸಂದರ್ಭದಲ್ಲಿ ದೇಶದ ಬೆಳವಣಿಗೆ ಹಾಗೂ ಸವಾಲುಗಳನ್ನು ಎದುರಿಸುವ ಕುರಿತು, ಆರ್ಥಿಕ ಅಭಿವೃದ್ಧಿ ಕುರಿತು, ಸಾಮಾಜಿಕ ಶಾಂತಿ ಕುರಿತು ಚರ್ಚೆಗಳಾಗಬೇಕೆ ಹೊರತು ಐತಿಹಾಸಿಕ ವಿಷಯಗಳ ಕುರಿತು ಮಿತಿ ಮೀರಿ ಮಾತನಾಡಿ ಅವುಗಳಿಗೆ ಪ್ರತಿಕ್ರೀಯೆ ನೀಡುವುದರಿಂದ ಜನತೆಯಲ್ಲಿ ಗೊಂದಲು ಸೃಷ್ಠಿಯಿಂದ ಯಾರಿಗೂ ಉಪಯೋಗವೂ ಇಲ್ಲ ಯಾರಿಗೂ ಪ್ರಯೋಜನವೂ ಇಲ್ಲ. ಇವೆಲ್ಲ ಅನಾವಷ್ಯಕ ಚರ್ಚೆಗಳಾಗುತ್ತಿದ್ದಾವೆ ಎನ್ನುವುದು ನನ್ನ ಭಾವನೆ ಎಂದರು.
ರಾಜ್ಯದ ಹಿಂದುಳಿದ ವರ್ಗಗಳ ಸಮೀತಿ ಕೈಗೊಂಡಿರುವ ಸಮೀಕ್ಷಾ ವರದಿ ಬಹಳಷ್ಟು ಪ್ರಗತಿಯಲ್ಲಿದೆ. ವರದಿ ಬಂದ ಮೇಲೆ ಅದರ ಒಟ್ಟು ಶಿಫಾರಸ್ಸುಗಲೀಗೆ ಅದರ ಪ್ರಭಾವ ಕುರಿತು ಸಾಧಕ ಬಾಧಕಗಳ ಕುರಿತು ಗಮನಿಸಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೀಸಲಾತಿ ನೀಡುವ ಕುರಿತು ಅದರದೇ ಆದಂತಹ ನಿಯಮಾವಳಿಗಳನ್ನು ಮಾಡಿಕೊಂಡಿವೆ ಹಾಗೂ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು ನ್ಯಾಯ ನೀಡುವುದಕ್ಕೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾವುದು. ಈ ಕುರಿತು ಪಂಚಮಸಾಲಿ ಪೀಠದ ಗುರುಗಳೊಂದಿಗೆ ನಾನು ಮಾತನಾಡುತ್ತೇನೆ ಎಂದರ ಹೇಳಿದರು.
೨೦೧೩ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬಳ್ಳಾರಿ ಛಲೋ ಮಾಡಿದರು. ಪ್ರಸಕ್ತ ೨೦೧೩ರಲ್ಲಿ ಮಡಕೇರಿ ಛಲೋ ಕಾರ್ಯಕ್ರಮವನ್ನು ಆಯೋಜನೆ ಮಾಡುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ೨೦೧೩ ಯಾವುದೇ ಕಾರಣಕ್ಕೂ ೨೦೨೩ ಆಗಲಿಕ್ಕೆ ಸಾಧ್ಯವಿಲ್ಲ. ಜನತೆ ಅವರ ಆಡಳಿತವನ್ನು ಐದು ವರ್ಷ ಗಮನಿಸಿದ್ದಾರೆ ಅವರನ್ನು ತಿರಸ್ಕರಿಸಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!