ಹೊಸದಿಗಂತ ವರದಿ ಗಂಗಾವತಿ:
ಸಾಣಾಪೂರ ಕೆರೆಯ ಬಳಿ ನಶೆ ಬರುವ ವಸ್ತುವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಪೋಲಿಸರು 6 ಜನರನ್ನು ಬಂಧಿಸಿ ಅವರಿಂದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮಂಜುನಾಥ ಎಸ್ ಹಾಗೂ ಸಿಬ್ಬಂದಿ ಶಿವಶರಣ, ಮಲ್ಲೇಶಪ್ಪ, ರಾಘವೇಂದ್ರ, ಮುತ್ತುರಾಜ, ಸೈಯದ್ ಗೌಸ್, ಮಹಾಂತೇಶ ಅಮರೇಶ, ಪ್ರಭುಗೌಡರವರ ಒಳಗೊಂಡ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಚಿನ್, ಅಶ್ವಿನ್ ಲಾರೆನ್ಸ್, ಕಿರಣ್ ಹನುಮಂತಪ್ಪ ಮುದೇನೂರ, ನಿಖಿಲ್ ವಸಂತಕುಮಾರ್, ಸುರೇಶ್ ಬಿ.ವಂಕಟೇಶ್, ಪೂರ್ಣಚಂದ್ರ ರಾಮಕೃಷ್ಣ ನೆಕ್ಕಂಟಿ ಯವರನ್ನು ವಶಕ್ಕೆ ಪಡೆದು ಆರೋಪಿತರಿಂದ 342 ಗ್ರಾಂ ಗಾಂಜಾ ಒಂದು ಕಾರು, ಒಂದು ಹೋಂಡಾ ಹಾರ್ನೆಟ್ ಹಾಗೂ ನಗದು ಹಣ 3000 ರೂ.ಳನ್ನು ಜಪ್ತು ಮಾಡಿಕೊಳ್ಳಲಾಗಿದ್ದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ.