ದಿಢೀರ್‌ ಮಾಡಿ ಬೆಳ್ಳುಳ್ಳಿ ತಂಬ್ಳಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವುದೇ ತರಕಾರಿ ಇಲ್ಲದ ವೇಳೆ ಕೇವಲ ಮೂರು ಪದಾರ್ಥಗಳನ್ನು ಬಳಸಿ ಬೆಳ್ಳುಳ್ಳಿ ತಂಬ್ಳಿ ಮಾಡಿ, ಬಿಸಿ ಬಿಸಿ ಅನ್ನದ ಜೊತೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕರಾವಳಿ ಭಾಗದವರಿಗೆ ಅಚ್ಚಿಮೆಚ್ಚಿನ ಖಾದ್ಯ ಕೂಡ ಇದು.

ಬೇಕಾಗುವ ಪದಾರ್ಥಗಳು

ತೆಂಗಿನತುರಿ-ಅರ್ಧ ಕಪ್‌
ಒಣ ಮೆಣಸು-ಒಂದು ಅಥವಾ ಎರಡು
ಬೆಳ್ಳುಳ್ಳಿ-ಒಂದು, ಮೊಸರು-ಅರ್ಧಕಪ್
ಒಗ್ಗರಣೆ ಪದಾರ್ಥಗಳು

ಮಾಡುವ ವಿಧಾನ:

ಒಗ್ಗರಣೆ ಬಟ್ಟಲಿಗೆ ಒಂದು ಟೀ ಸ್ಪೂನ್‌ ಎಣ್ಣೆ ಹಾಕಿ ಮೆಣಸಿನಕಾಯಿ ಹಾಗೂ ಬಿಡಿಸಿದ ಬೆಳ್ಳುಳ್ಳಿ ಹಾಕಿ ಕಂದು ಬರುವವರೆಗೆ ಉರಿದುಕೊಳ್ಳಿ, ಒಂದು ಮಿಕ್ಸಿ ಜಾರಿಗೆ ಅರ್ಧಕಪ್‌ ತೆಂಗಿನತುರಿ ಜೊತೆಗೆ ಉರಿದ ಪದಾರ್ಥಗಳನ್ನು ಹಾಕಿ ರುಬ್ಬಿಕೊಳ್ಳಿ.‌ ಅದಕ್ಕೆ ಅರ್ಧ ಕಪ್‌ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೊಮ್ಮೆ ಗ್ರೈಂಡ್‌ ಮಾಡಿ ಬಟ್ಟಲಿಗೆ ಸುರಿಯಿರಿ. ಅದಕ್ಕೀಗ ಸಾಸಿವೆ, ಓಣಮೆಣಸು, ಕರಿಬೇವಿನ ಒಗ್ಗರಣೆ ಕೊಟ್ಟರೆ ಬೆಳ್ಳುಳ್ಳಿ ತಂಬ್ಳಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!