ಉಡುಪಿಯಲ್ಲಿ ಬುಲೆಟ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ: ಕಾಪು ಹೈ ಅಲಟ್೯

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಬಳಿಯ ಕೋತಲ್ ಕಟ್ಟೆ ಬಳಿ ಗ್ಯಾಸ್ ಟ್ಯಾಂಕರೊಂದರಿಂದ ಅನಿಲ ಮಾದರಿಯ ಲಿಕ್ವೀಡ್ ಸೋರಿಕೆಯಾಗಿದೆ. ಸ್ಥಳದಲ್ಲಿ ಸ್ವಲ್ಪ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸುರಕ್ಷತಾ ಕ್ರಮವಾಗಿ ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಕಾಪು ಪೋಲಿಸರು ವ್ಯವಸ್ಥೆ ಮಾಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಲಿಕ್ವಿಡ್ ಸೋರಿಕೆಯನ್ನು ಸರಿಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!