August 24, 2026
Monday, August 24, 2026
spot_img

ರಿಲಾಯನ್ಸ್ ಒಡೆಯಗೆ ಶಾಕ್ ನೀಡಿದ ಅದಾನಿ: ಮುಖೇಶ್ ಅಲ್ಲ, ಗೌತಮ್ ಈಗ ಏಷ್ಯಾದ ನಂ.1 ಶ್ರೀಮಂತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿಯನ್ನು ಹಿಂದಿಕ್ಕಿ ಅದಾನಿ ಗ್ರೂಪ್ಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್‌ ಅದಾನಿ ಇದೀಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಅದಾನಿ ಗ್ರೂಪ್‌ ಷೇರು ಮೌಲ್ಯದಲ್ಲಿ ಲಾಭ ಉಂಟಾಗಿದ್ದು, ಎರಡನೇ ಸ್ಥಾನದಲ್ಲಿದ್ದ ಅದಾನಿ ಇದೀಗ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ.

ಈ ಬದಲಾವಣೆಗೂ ಮುನ್ನ ಹಲವು ವರ್ಷಗಳ ಕಾಲ ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಇದೀಗ, ಅದಾನಿಯ ಸಂಪತ್ತು $92.6 ಬಿಲಿಯನ್ ಆಗಿದ್ದರೆ, ಅಂಬಾನಿಯ ಸಂಪತ್ತು ಸುಮಾರು $90.8 ಬಿಲಿಯನ್ ಆಗಿದೆ. ಇಬ್ಬರೂ ಉದ್ಯಮಿಗಳು ವಿಶ್ವದ ಅಗ್ರ 20 ಶ್ರೀಮಂತ ವ್ಯಕ್ತಿಗಳಲ್ಲಿ ಸೇರಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !