ಹೊಸದಿಗಂತ ಡಿಜಿಟಲ್ ಡೆಸ್ಕ್
ಗಾಜಿಯಾಬಾದ್‌ನ ಕೌಶಾಂಬಿಯಲ್ಲಿರುವ ಪ್ರಖ್ಯಾತ ರಾಡಿಸನ್ ಬ್ಲೂ ಹೋಟೆಲ್‌ನ ಮಾಲೀಕ ಅಮಿತ್ ಜೈನ್ ಶನಿವಾರ ದೆಹಲಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜೈನ್ ಕಾಮನ್‌ವೆಲ್ತ್ ಗೇಮ್ಸ್ ಹಳ್ಳಿಯಲ್ಲಿರುವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬದೊಂದಿಗೆ ತಾವು ಸ್ಥಳಾಂತರಗೊಳ್ಳುತ್ತಿರುವ ನೋಯ್ಡಾದ ಹೊಸ ಮನೆಗೆ ಬಂದಿದ್ದ ಅವರು ಆ ಬಳಿಕ ಕಾಮನ್‌ವೆಲ್ತ್ ಗೇಮ್ಸ್ ಗ್ರಾಮಕ್ಕೆ ಏಕಾಂಗಿಯಾಗಿ ಕಾರಿನಲ್ಲಿ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಅವರ ಮಗ ಕೆಲ ಗಂಟೆಗಳ ಬಳಿಕ ಡ್ರೈವರ್‌ನೊಂದಿಗೆ ಕೆಲವು ಸರಕುಗಳನ್ನು ತೆಗೆದುಕೊಳ್ಳಲು ಮನೆಗೆ ಹೋದಾಗ ಜೈನ್ ನೇಣಿಗೆ ಶರಣಾಗಿದ್ದು ಕಂಡುಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.