Saturday, October 1, 2022

Latest Posts

ಹಾರವಾಡದ ಕಡಲ ತೀರದಲ್ಲಿ ಬೃಹತ್ ಗಾತ್ರದ ಮೀನಿನ ಕಲಾಕೃತಿ: ಕಲಾವಿದನ ಕ್ರಿಯಾಶೀಲತೆಗೆ ಮೆಚ್ಚುಗೆ

ಹೊಸದಿಗಂತ ವರದಿ, ಅಂಕೋಲಾ:

ಕರ್ನಾಟಕ ರಾಜ್ಯ ಕರಾವಳಿ ಕಾವಲು ಪೊಲೀಸ್, ಮತ್ತು ಕರಾವಳಿ ಕಾವಲು ಪೊಲೀಸ್ ಠಾಣೆ ಬೆಲೇಕೇರಿ, ಕಾರವಾರ, ಕುಮಟಾ, ಹೊನ್ನಾವರ ಇವರ ಸಹಯೋಗದಲ್ಲಿ ತಾಲೂಕಿನ ಹಾರವಾಡದ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಪ್ರಯುಕ್ತ ಕಡಲ ತೀರದಲ್ಲಿ ರಚಿಸಿದ ಮರಳ ಕಲಾಕೃತಿಗೆ ಅಪಾರ ಜನರ ಮೆಚ್ಚುಗೆ ವ್ಯಕ್ತವಾಯಿತು.
ಕಲಾವಿದ ಕುಮಟಾ ಕಾಗಾಲದ ಸತ್ಯಾನಂದ ಆಚಾರಿ, ಗಜಾನನ ಆಚಾರಿ, ಗಣೇಶ, ದೇವಮೂರ್ತಿ ಮೊದಲಾದವರು ಕಡಲ ತೀರದಲ್ಲಿ ಮರಳಿನಿಂದ ಬೃಹತ್ ಗಾತ್ರದ ಮೀನಿನ ಕಲಾಕೃತಿ ನಿರ್ಮಿಸಿರುವುದು ಸ್ಥಳೀಯ ಮೀನುಗಾರರು ಸೇರಿದಂತೆ ಹಲವಾರು ಜನರು ಬೆರಗಾಗಿ ವೀಕ್ಷಿಸಿದರು.
ಕಡಲ ತೀರದಲ್ಲಿ ಮೀನು ಮಲಗಿದಂತೆ ಕಂಡು ಬರುತ್ತಿದ್ದ ಮರಳ ಕಲೆಗೆ ಮನಸೋತ ಹಲವಾರು ಜನರು ಕಲಾವಿದರ ಕೈಚಳಕ ಮತ್ತು ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!