ದೇವರನಾಡಿನಲ್ಲಿ ಗಿಲ್-ಕೊಹ್ಲಿ ಅಬ್ಬರ: ಶ್ರೀಲಂಕಾಕ್ಕೆ ಬೃಹತ್ ಟಾರ್ಗೆಟ್ ಕೊಟ್ಟ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇವರ ನಾಡು ಕೇರಳದಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ,ಶ್ರೀಲಂಕಾ ತಂಡಕ್ಕೆ 391 ರನ್ ಗಳ ಕಠಿಣ ಸವಾಲು ನೀಡಿದ್ದಾರೆ.

ಲಂಕಾ ವಿರುದ್ಧದ ಏಕದಿನ ಸರಣಿಯನ್ನು ವಶಮಾಡಿಕೊಂಡ ಟೀಮ್ ಇಂಡಿಯಾ 3ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಇಳಿದಿದೆ.

ಅರಂಭದಲ್ಲಿ ಉತ್ತಮ ಬ್ಯಾಟ್ ಬೀಸಿದ ನಾಯಕ ರೋಹಿತ್ ಶರ್ಮಾ, ಶಭಮನ್ ಗಿಲ್ ಉತ್ತಮ ಜೊತೆಯಾಟ ನೀಡಿದರು . ರೋಹಿತ್ ಶರ್ಮಾ 42 ರನ್ ಸಿಡಿಸಿ ಔಟಾದರು.

ಬಳಿಕ ಜೊತೆಯಾದ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಟೀಂ ಇಂಡಿಯಾದದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಶುಭಮನ್ ಗಿಲ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚಿದರು. ಗಿಲ್ ಏಕದಿನದಲ್ಲಿ 2ನೇ ಶತಕ ಸಾಧನೆ ಮಾಡಿದರು.

ಶುಭಮನ್ ಗಿಲ್ 97 ಎಸೆತದಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 116 ರನ್ ಸಿಡಿಸಿ ಔಟಾದರು.
ಗಿಲ್ ಬಳಿಕ ಕೊಹ್ಲಿ ಅಬ್ಬರ ಮುಂದುವರಿಯಿತು. ಕೊಹ್ಲಿಯ 46ನೇ ಏಕದಿನ ಸೆಂಚುರಿ ಸಿಡಿಸಿದರು.

ಶ್ರೇಯಸ್ ಅಯ್ಯರ್ 32 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಇತ್ತ ಕೆಎಲ್ ರಾಹುಲ್ ನಿರೀಕ್ಷಿತ ರನ್ ಸಿಡಿಸಲಿಲ್ಲ. ಕೇವಲ 7 ರನ್ ಸಿಡಿಸಿ ನಿರಾಸೆ ಮೂಡಿಸಿದರು.

ಇತ್ತ ಕೊಹ್ಲಿ ಅಬ್ಬರ ಮುಂದುವರಿಯಿತು. ಸೂರ್ಯಕುಮಾರ್ ಯಾದವ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 110 ಎಸೆತದಲ್ಲಿ 13 ಬೌಂಡರಿ ಹಾಗೂ 8 ಸಿಕ್ಸರ್ ಮೂಲಕ ಅಜೇಯ 166 ರನ್ ಸಿಡಿಸಿದರು. ಇದರೊಂದಿಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 390 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!