October 10, 2026
Saturday, October 10, 2026
spot_img

SHOCKING | ಜೋಕಾಲಿ ಆಡ್ತಿದ್ದ ವೇಳೆ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೇಸಿಗೆ ರಜೆಯೆಂದು ಕಾಲ ಕಳೆಯೋದಕ್ಕೆ ಜೋಕಾಲಿ ಆಡುತ್ತಿದ್ದ ಬಾಲಕಿಯ ಪ್ರಾಣ ಪಕ್ಷಿಯೇ ಹಾರಿಹೋಗಿದೆ.

ಚಿಕ್ಕಮಗಳೂರಿನ ಹೆಬ್ಬಳ್ಳಿಯಲ್ಲಿ ಬಾಲಕಿಯೊಬ್ಬಳು ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಹೆತ್ತವರ ಜೀವನಕ್ಕೆ ಬೆಳಕೇ ಇಲ್ಲದಂತಾಗಿದೆ.

10 ವರ್ಷದ ಲೇಖನಾ ಮೃತ ದುರ್ದೈವಿಯಾಗಿದ್ದಾಳೆ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಜೋಕಾಲಿ ಆಡ್ತಿದ್ದ ಬಾಲಕಿ ಕತ್ತಿಗೆ ಸೀರೆ ಸುತ್ತಿಕೊಂಡು ಸ್ಥಳದಲ್ಲೇ ಲೇಖನಾ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Must Read