May 31, 2026
Sunday, May 31, 2026
spot_img

ಜೋಕಾಲಿಯಲ್ಲಿ ಆಟವಾಡುತ್ತಾ ಕುತ್ತಿಗೆಗೆ ದಾರ ಸಿಲುಕಿ ಬಾಲಕಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಅದರ ದಾರ ಕುತ್ತಿಗೆಗೆ ಸಿಲುಕಿ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ ನಡೆದಿದೆ.

ಶಿವಮೊಗ್ಗದ ವಿದ್ಯಾನಗರದ ಬಾಲಕಿ ಪ್ರಣಮ್ಯಗೆ ಬರೀ ಒಂಬತ್ತು ವರ್ಷ. ಮನೆಯ ಕಣ್ಮಣಿಯಾಗಿದ್ದ ಪ್ರಣಮ್ಯಳನ್ನು ಕಳೆದುಕೊಂಡು ಇಡೀ ಕುಟುಂಬ ದಿಕ್ಕಾಪಾಲಾದಂತಾಗಿದೆ.

ಬೇಸಿಗೆ ರಜದಲ್ಲಿ ಚಿಕ್ಕಮ್ಮನ ಮನೆಗೆ ಹೋಗ್ತೀನಿ ಎಂದು ಪ್ರಣಮ್ಯ ಹಠ ಮಾಡಿದ್ದಳು. ಚಿಕ್ಕಮ್ಮನ ಮನೆಯಲ್ಲಿ ಒಂದು ವಾರದಿಂದ ಪ್ರಣಮ್ಯ ಆಟ ಆಡಿಕೊಂಡು ಹಾಯಾಗಿದ್ದಳು. ಚಿಕ್ಕಮ್ಮನ ಮಕ್ಕಳು ಕಾಟ ಕೊಡ್ತಾರೆಂದು ರೂಮಿನ ಬಾಗಿಲು ಹಾಕಿಕೊಂಡು ಪಂಚೆಯಿಂದ ಜೋಕಾಲಿ ಕಟ್ಟಿಕೊಂಡಿದ್ದಳು.

ಈ ವೇಳೆ ಪಂಚೆಯ ಕುಣಿಗೆ ಅವಳ ಕುತ್ತಿಗೆಗೆ ಬಿಗಿದಿದೆ. ಆಕೆಗೆ ಉಸಿರಾಡಲು ಆಗಿಲ್ಲ. ಒದ್ದಾಡಿದರೂ ಕೇಳಿಸೋಕೆ ಅಥವಾ ಆಕೆಯನ್ನು ನೋಡೋದಕ್ಕೆ ಯಾರೂ ಇರಲಿಲ್ಲ. ಕುಟುಂಬದವರು ಬಾಗಿಲು ತೆಗೆದ ವೇಳೆ ಪ್ರಣಮ್ಯಾ ಮೃತಪಟ್ಟಿದ್ದಳು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !