ಹೆಣ್ಣುಮಕ್ಕಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವಂತಿಲ್ಲ: ಅಫ್ಘಾನಿಸ್ತಾನ ತಾಲಿಬಾನ್‌ ಸರ್ಕಾರದ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಣ್ಣಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವುದನ್ನು ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ನಿರ್ಬಂಧಿಸಿದೆ.

ಕಜಾಕಿಸ್ತಾನ ಹಾಗೂ ಕತಾರ್‌ ದೇಶಗಳಿಗೆ ಸಾಮಾನ್ಯವಾಗಿ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದರು. ಇದಕ್ಕೆ ತಾಲಿಬಾನ್‌ ಸರ್ಕಾರ ನಿಷೇಧ ಹೇರಿದ್ದು ಕೇವಲ ಗಂಡುಮಕ್ಕಳು ಮಾತ್ರವೇ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಹುದು ಎಂದು ಹೇಳಿದೆ.

ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಹುಡುಗಿಯರಿಗಾಗಿ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮೊದಲ ಹಂತದಲ್ಲಿ ಮುಚ್ಚಿತ್ತು. ಆದರೆ, ದೇಶದಲ್ಲಿ ಮಹಿಳೆಯರ ಪ್ರತಿಭಟನೆಗಳು ತೀವ್ರವಾದ ಬೆನ್ನಲ್ಲಿಯೇ 6ನೇ ತರಗತಿಯವರೆಗೆ ಮಹಿಳೆಯರಿಗೂ ಶಾಲೆಯನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ ಇದೀಗ ಉನ್ನತ ಶಿಕ್ಷಣದ ವಿರುದ್ಧ ಹೊಸ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡ, ತಾಲಿಬಾನ್‌ ತನ್ನ ಹೇಳಿಕೆಯಲ್ಲಿ ತಾವು ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತೇವೆ ಎನ್ನುವುದು. ಆದರೆ, ಕಳೆದ ಒಂದು ವರ್ಷದಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಯನ್ನು ಇಡೀ ಜಗತ್ತು ಮೂಖವಾಗಿ ನೋಡುತ್ತಿದೆ. ಹೆಣ್ಣುಮಕ್ಕಳು ಇರುವ ಕುಟುಂಬಕ್ಕೆ ತೀರಾ ಕಡಿಮೆ ಆಹಾರವನ್ನು ನೀಡಲಾಗುತ್ತಿದೆ. ಇನ್ನು ಗಂಡುಮಕ್ಕಳಿದ್ದ ಕುಟುಂಬಕ್ಕೆ ಹೆಚ್ಚು ಆಹಾರ, ಪಡಿತರ ನೀಡುವ ಮೂಲಕ ತಾರತಮ್ಯ ಎಸಗಲಾಗುತ್ತಿದೆ.

ತಾಲಿಬಾನ್‌ ಈವರೆಗೂ ಮಹಿಳೆಯರ ವಿರುದ್ಧ ಹಲವು ಕಾನೂನು ಜಾರಿಗೆ ತಂದಿದೆ. ಮಾರ್ಚ್‌ನಲ್ಲಿ ತಾಲಿಬಾನ್ ಮಹಿಳೆಯರು ಏಕಾಂಗಿಯಾಗಿ ವಿಮಾನ ಪ್ರಯಾಣ ಮಾಡುವಂತಿಲ್ಲ ಎಂದು ಹೇಳಿತ್ತು.

ತಾಲಿಬಾನ್ ಆಡಳಿತವು ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಮಹಿಳೆಯರು ಹಾಗೂ ಪುರುಷರು ಜೊತೆಯಾಗಿ ಹೋಗುವಂತಿಲ್ಲ ಎಂದು ಹೇಳಿದೆ.

ಮಹಿಳೆಯರು ಸಾರ್ವಜನಿಕವಾಗಿ ಮುಖ ಮುಚ್ಚಿಕೊಳ್ಳಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಬೇಕು ಎಂದು ತಾಲಿಬಾನ್ ಆದೇಶ ಹೊರಡಿಸಿತ್ತು.

ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಿ ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದೆ. ತಾಲಿಬಾನ್ ಹೊರಡಿಸಿದ ಹೇಳಿಕೆಯಲ್ಲಿ, ಪುರುಷ ಸಂಬಂಧಿ ಇಲ್ಲದೆ ದೂರದ ಪ್ರಯಾಣ ಮಾಡುವ ಮಹಿಳೆಯರನ್ನು ಪ್ಯಾಸೆಂಜರ್ ಕಾರಿನಲ್ಲಿ ಹಾಕಬಾರದು ಎಂದು ಹೇಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!