ಹಿಜಾಬ್‌ ವಿರೋಧಿ ಪ್ರತಿಭಟನಾಕಾರನನ್ನು ಗಲ್ಲಿಗೇರಿಸಿದ ಇರಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಜಾಬ್‌ ವಿರೋಧ ಪ್ರತಿಭಟನೆ ವೇಳೆ ಸೆಕ್ಯೂರಿಟಿ ಗಾರ್ಡ್‌ ನನ್ನು ಚಾಕುವಿನಿಂದ ಗಾಯಗೊಳಿಸಿ ಟೆಹ್ರಾನ್ ರಸ್ತೆಯನ್ನು ಮುಚ್ಚಿದ್ದಕ್ಕಾಗಿ ಶಿಕ್ಷೆಗೊಳಗಾದ ಒಬ್ಬ ಪ್ರತಿಭಟನಾಕಾರನನ್ನು ಇರಾನ್ ಗುರುವಾರ ಗಲ್ಲಿಗೇರಿಸಿದೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆರೋಪಿಯ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆತನ ಕೃತ್ಯ “ದೇವರ ವಿರುದ್ಧ ಯುದ್ಧ ಮಾಡುವ ಅಪರಾಧ” ಎಂದು ಹೇಳುವ ಮೂಲಕ ಶಿಕ್ಷೆಯನ್ನು ಸಮರ್ಥಿಸಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!