ಶ್ರದ್ಧಾ ವಾಕರ್‌ ಕೊಲೆ ಪ್ರಕರಣ: ಆರೋಪಿ ಅಫ್ತಾಬ್ ವಿರುದ್ಧ 6 ಸಾವಿರ ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರದ್ಧಾ ವಾಕರ್‌ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್‌ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದೆ. 6636 ಪುಟಗಳ ವಿವರವಾದ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆ ಚಾರ್ಜ್ ಶೀಟ್ ನಲ್ಲಿ ಆರೋಪಿ ಅಫ್ತಾಬ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಅಚ್ಚರಿಅಂದರೆ ಈ ಚಾರ್ಜ್‌ಶೀಟ್‌ಅನ್ನು ಸ್ವತಃ ಅಫ್ತಾಬ್‌ ತನ್ನ ವಕೀಲರಿಗೆ ತೋರಿಸೋದು ಬೇಡ ಎಂದು ಹೇಳಿದ್ದಾರೆ. ವಕೀಲರನ್ನು ಬದಲಾವಣೆ ಪ್ರಸ್ತಾಪ ಮಾಡುವ ವಿಚಾರವನ್ನು ಅಫ್ತಾಭ್‌ ಮಾಡಿದ್ದು, ಅದಕ್ಕೂ ಮುನ್ನ ಯಾವುದೇ ವಕೀಲರಿಗೆ ತನ್ನ ಚಾರ್ಜ್‌ಶೀಟ್‌ ತೋರಿಸೋದು ಬೇಡ ಎಂದಿದ್ದಾರೆ. ಸದ್ಯ ಅಫ್ತಾಬ್‌ನ ನ್ಯಾಯಾಂಗ ಬಂಧನವನ್ನು ಫೆಬ್ರವರಿ 7ರವರೆಗೆ ವಿಸ್ತರಿಸಲಾಗಿದೆ.

ಅಫ್ತಾಬ್ ನ ನಾರ್ಕೋ ಟೆಸ್ಟ್ ಮಾಡಿಸಿದ ಪೊಲೀಸರು, .ಪಾಲಿಗ್ರಫಿ ಟೆಸ್ಟ್ ಮಾಡಿಸಿ, ಹಲವು ರೀತಿಯ ಪ್ರಶ್ನೆ-ಉತ್ತರಗಳನ್ನು ಕೇಳಿದ ನಂತರ ಈ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆ.

ಅಫ್ತಾಬ್, ಕಳೆದ ವರ್ಷ ಮೇ 18 ರಂದು ತನ್ನ ಲಿವ್‌ ಇನ್‌ ಪಾರ್ಟ್‌ನರ್‌ ಆಗಿದ್ದ ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಕೆ ಸಾವು ಕಂಡ ಬಳಿಕ, ಆಕೆಯ ದೇಹವನ್ನು ನಿರ್ದಯವಾಗಿ 35 ಪೀಸ್‌ಗಳನ್ನಾಗಿ ಮಾಡಿದ್ದ. ನಂತರ ಇನ್ನಷ್ಟು ಜಾಣತನದಿಂದ ಮೆಹ್ರುಲಿಯ ಅರಣ್ಯ ಸೇರಿದಂತೆ ನಗರದ ವಿವಿದೆಡೆ ಬಿಸಾಡಿದ್ದನು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!