ವೈಭವದ ಹಂಪಿ ಉತ್ಸವ:  ಅದ್ದೂರಿಯಾಗಿ ನಡೆದ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ

ಹೊಸ ದಿಗಂತ ವರದಿ, ಹಂಪಿ:

ವಿಶ್ವ ಪ್ರಸಿದ್ಧ ಹಂಪಿ ಉತ್ಸವ ಹಿನ್ನೆಲೆ ಭಾನುವಾರ ಸಂಜೆ ತಾಯಿ ಶ್ರೀ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ ಅತ್ಯಂತ ವೈಭವದೊಂದಿಗೆ ಅದ್ದೂರಿಯಾಗಿ ನಡೆಯಿತು.

ಹಂಪಿಯ ಉದ್ದಾನ ಶ್ರೀ ವೀರಭದ್ರೇಶ್ವರ ದೇಗುಲ ಬಳಿ  ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆನಂದ್ ಸಿಂಗ್ ಅವರು  ತಾಯಿ ಶ್ರೀ ಭುವನೇಶ್ವರ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಗಳನ್ನು ಸಮರ್ಥಿಸುವ ಮೂಲಕ ತಾಯಿ ಭುವನೇಶ್ವರಿಯ ಜಾನಪದ ವಾಹಿನಿ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಾಡಿನ ಕಲಾ ತಂಡಗಳು ಭಾಗವಹಿಸಿದ್ದು, ವೈವಿಧ್ಯತೆಗೆ ಸಾಕ್ಷಿಯಾಯಿತು.
ಬಳ್ಳಾರಿ, ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳು ಮೆರವಣಿಯಲ್ಲಿ  ಭಾಗವಹಿಸಿ ಗಮನಸೆಳೆದವು. ಜಾನಪದ ಕಲಾ ಸೊಬಗಿನೊಂದಿಗೆ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ ಇದಕ್ಕೆ ಸಾಕ್ಷಿಯಾಯಿತು. ಈ ಮೆರವಣಿಗೆಯಲ್ಲಿ ವಿದೇಶಿ  ಪ್ರವಾಸಿಗರು ಭಾಗವಹಿಸಿ ಜಾನಪದ ಕಲೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ವಿಡಿಯೋ, ಪೋಟೋ ತೆಗೆದುಕೊಂಡು ವಿದೇಶಿಗರು ಸಂಭ್ರಮಿಸಿದರು. ಮೆರವಣಿಗೆಯಲ್ಲಿ ವಿದೇಶಿ ಮಹಿಳೆಯರು ಜನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.

ಗಮನ ಸೆಳೆದ ಜಾನಪದ ವಾಹಿನಿ ಮೆರವಣಿಗೆ; ಮೆರವಣಿಗೆಯಲ್ಲಿ ಜಾನಪದ ಕಲಾ ಪ್ರಕಾರಗಳು, ಕಲಾತಂಡಗಳು ನೋಡುಗರ ಗಮನ ಸೆಳೆದವು. ತಾಷಾರಂಡೋಲ್, ಹಲಗೆವಾದನ, ವೀರಗಾಸೆ, ನಾದಸ್ವರ, ಹಗಲುವೇಷ, ಸಿಂಧೋಳ್ ಕುಣಿತ, ನಂದಿಧ್ವಜ, ಕಹಳೆ ವಾದನ, ಮರಗಾಲು ಕುಣಿತ, ಗೊಂಬೆ ಕುಣಿತ, ಹಕ್ಕಿಪಿಕ್ಕಿ ನೃತ್ಯ, ಕರಡಿ ಮೇಳ, ಪುರವಂತಿಕೆ, ಪೂಜಾ ಕುಣಿತ, ಬೊಂಬೆ ನೃತ್ಯ, ಚಿಲಿಪಿಲಿ ಗೊಂಬೆ, ಸಮಾಳವಾದನ, ಮಹಿಳಾ ನಗಾರಿ, ಲಂಭಾಣಿ ವೃತ್ತ, ಮಹಿಳಾ ಪಟಕುಣಿತ, ಕೊಡವ ನೃತ್ಯ, ಕೋಳಿ ನೃತ್ಯ, ನಗಾರಿ, ಕಂಸಾಳೆ, ಚಂಡೆವಾದ್ಯ, ಸೋಮನ ಕುಣಿತ, ಮಹಿಳಾ ಡೊಳ್ಳುಕುಣಿತ, ಯಕ್ಷಗಾನ, ಹುಲಿವೇಷ, ಗಾರುಡಿಗೊಂಬೆ, ಪಾತರಗಿತ್ತಿ ನೃತ್ಯ, ಗೊರವರ ಕುಣಿತ, ಚಿಟ್ಟಿಮೇಳ ಕಲಾತಂಡಗಳು ಮೆರವಣಿಯಲ್ಲಿ ಭಾಗವಹಿಸಿ ಗಮನಸೆಳೆದವು. ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿ ಮೆರವಣಿಗೆ ಹಂಪಿಯ ಬಜಾರ್ ಮೂಲಕ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಅತ್ಯಂತ ವೈಭವದಿಂದ ಜರುಗಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!