ಆಗಸ್ಟ್ 1 ರಿಂದ ಜಿಮೇಲ್ ಸೇವೆ ಸ್ಥಗಿತ?: ಈ ಕುರಿತು ಗೂಗಲ್‌ ಕೊಟ್ಟ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೂಗಲ್‌ನ ಇ-ಮೇಲ್ ಸೇವೆ ಆಗಸ್ಟ್ 1 ರಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಇದೀಗ ಗೂಗಲ್ ಸ್ಪಷ್ಟನೆ ನೀಡಿದೆ.

ಲಕ್ಷಾಂತರ ಜನರಿಗೆ ಇ-ಮೇಲ್ ಸೇವೆಗಳನ್ನು ವರ್ಷಗಳಿಂದ ಒದಗಿಸುತ್ತಿರುವ ಜಿಮೇಲ್ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದ್ದು, ಆಗಸ್ಟ್ 1, 2024 ರಿಂದ ಈ ಸೇವೆಗಳು ನಿಲ್ಲುತ್ತವೆ ಎಂಬ ಸ್ಕ್ರೀನ್‌ಶಾಟ್ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆ ಸ್ಕ್ರೀನ್‌ಶಾಟ್‌ನಲ್ಲಿ, ಜಿಮೇಲ್​ ಸ್ವತಃ ಬಳಕೆದಾರರಿಗೆ ಇನ್ನು ಮುಂದೆ ಮೇಲ್‌ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇದು ಕೋಸ್ಟಾ ಎಕ್ಸ್ ಮತ್ತು ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ. ಹಲವು ಜಿಮೇಲ್ ಬಳಕೆದಾರರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಪ್ರಚಾರಕ್ಕೆ ಗೂಗಲ್​ ಪ್ರತಿಕ್ರಿಯಿಸಿದೆ. ಈ ಸೇವೆಗಳು ಅಧಿಕೃತ X(ಎಕ್ಸ್​​) ಖಾತೆಯಿಂದ ಮುಂದುವರಿಯುತ್ತದೆ ಎಂದು ಜಿಮೇಲ್​ ಪೋಸ್ಟ್ ಮಾಡಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸುಳ್ಳು ಪ್ರಚಾರಕ್ಕೆ ಕಡಿವಾಣ ಬಿದ್ದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!