ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಅನಿಶ್ಚಿತತೆಯ ಭೀತಿಯಲ್ಲಿ ಟೆಕ್ ವಲಯದಲ್ಲಿ ಉದ್ಯೋಗ ಕಡಿತಗಳು ಮುಂದುವರೆದಿದ್ದು ಇದೀಗ ಜಾಗತಿಕ ವೆಬ್ ಹೋಸ್ಟಿಂಗ್ ಕಂಪನಿ ಗೋ ಡ್ಯಾಡಿ ಇದೀಗ ತನ್ನ 8 ಶೇಕಡಾ ಉದ್ಯೋಗಿಗಳನ್ನು ಮನೆಗೆ ಕಳಿಸಿದೆ.
ಈ ಕುರಿತು ಕಂಪನಿಯ ಸಿಇಒ ಅಮನ್ ಭೂತಾನಿ, ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಸವಾಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 8 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಅವರು ಆಂತರಿಕ ಈಮೇಲ್ ಒಂದನ್ನು ಕಳಿಸಿದ್ದು ಅದರಲ್ಲಿ ಉದ್ಯೋಗ ಕಡಿತಗಳು ಕಂಪನಿಯ ಪ್ರತಿ ವಿಭಾಗದ ವಿವಿಧ ಹಂತಗಳನ್ನು ಪ್ರಭಾವಿಸುತ್ತದೆ ಎಂದಿದ್ದಾರೆ. ಮುಖ್ಯವಾಗಿ ಕಂಪನಿಯ ಮೂರು ಮುಖ್ಯ ವಿಭಾಗಗಳಾದ ಮೀಡಿಯಾ ಟೆಂಪಲ್, ಮೇನ್ ಸ್ಟ್ರೀಟ್ ಹಬ್ ಮತ್ತು 123 ರೆಗ್ ಗಳಲ್ಲಿ ಉದ್ಯೋಗ ಕಡಿತಗಳು ನಡೆಯಲಿದ್ದು ಹೆಚ್ಚು ಪ್ರಭಾವಿತ ಪಾತ್ರಗಳು ಯುಎಸ್‌ನಲ್ಲಿದೆ ಎಂದಿದ್ದಾರೆ.
ಉದ್ಯೋಗ ಕಳೆದು ಕೊಳ್ಳುವವರಿಗೆ ಸ್ಥಳೀಯ ಕಾನೂನುಗಳು ಮತ್ತು ಪದ್ಧತಿಗಳಿಗೆ ಅನುಗುಣವಾಗಿ ಪರಿವರ್ತನೆಯ ಪ್ಯಾಕೇಜ್ ನೀಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಇದಲ್ಲದೇ ಕಂಪನಿಯಿಂದ ನೀಡಲಾಗಿದ್ದ ಆರೋಗ್ಯ ಸೇವೆಯಂತಹ ಸೌಲಭ್ಯಗಳನ್ನು ಹೆಚ್ಚಿನ ಸಮಯದವರೆಗೆ ಮುಂದುವರೆಸಲಾಗುತ್ತದೆ ಎಂದೂ ಹೇಳಿದ್ದಾರೆ.